ಅಣ್ಣ ತಮ್ಮಂದಿರ ನಡುವೆ ಗಲಾಟೆ – ಚೂರಿಯಿಂದ ಇರಿದು ಓರ್ವನ ಕೊಲೆ…

238
firstsuddi

ಮಂಗಳೂರು : ಆಸ್ತಿ ವಿಚಾರಕ್ಕೆ ಸಂಬಂಧಿಸಿ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆದು ಓರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಂಗಳೂರು ಬೆಂಗ್ರೆ ಸಮೀಪ ನಡೆದಿದೆ. ಮೃತ ವ್ಯಕ್ತಿಯನ್ನು ಮುಸ್ತಾಫಾ ಎಂದು ಗುರುತಿಸಲಾಗಿದ್ದು, ಕೊಲೆಗೈದ ವ್ಯಕ್ತಿಯನ್ನು ಮುಸ್ತಾಫಾನ ಸಹೋದರ ರೈಜು ಯಾನೆ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಮಂಗಳೂರು ತಾಲೂಕಿನ ಬೆಂಗ್ರೆಯ ಕಸಬಾ ಬೆಂಗ್ರೆ ಕಿಲಾರಿ ಮಸೀದಿ ಸಮೀಪ ಆಸ್ತಿಯ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿದ್ದು, ಮಂಗಳವಾರ ರಾತ್ರಿ ಕೂಡ ತಾಯಿ ಹಾಗೂ ತಂಗಿಯ ಮನೆಯ ವಿಚಾರದಲ್ಲಿ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ವೇಳೆ ತಾಯಿ ಹಾಗೂ ಇವರ ಬಾವ ಗಲಾಟೆ ಬಿಡಿಸಲು ಪ್ರಯತ್ನಿಸಿದ್ದ ವೇಳೆ ಆರೋಪಿ ಅಬ್ದುಲ್ ರೆಹಮಾನ್ ತನ್ನ ಬಳಿ ಇದ್ದ ಚೂರಿಯಿಂದ ಮುಸ್ತಾಫನಿಗೆ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮುಸ್ತಾಫನನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪಣಂಬೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.