ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ : ಮನೇಕಾ ಗಾಂಧಿ.

444
firstsuddi

ನವದೆಹಲಿ : ಹೈದರಾಬಾದ್‍ನಲ್ಲಿ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳನ್ನು ಎನ್‍ಕೌಂಟರ್ ಮಾಡಿರುವ ಬಗ್ಗೆ ಇಡೀ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಬಾರದಿತ್ತು. ಕಾನೂನಿನ ಪ್ರಕಾರವಾಗಿ ಆರೋಪಿಗಳನ್ನು ಗಲ್ಲಿಗೇರಿಸಬೇಕಿತ್ತು ಎಂದು ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರು ಹೇಳಿದ್ದಾರೆ. ಈ ಕುರಿತು ಸಂಸತ್ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಚಾರಿಗಳನ್ನು ಕೊಲ್ಲಲೇಬೇಕೆಂದು ಎನ್‍ಕೌಂಟರ್ ಮಾಡಿರುವ ಕ್ರಮ ಸರಿಯಲ್ಲ. ಇದು ಒಂದು ಭಯಾನಕ ಘಟನೆ. ಆರೋಪಿಗಳನ್ನು ಎನ್‍ಕೌಂಟರ್ ಮಾಡಬಾರದಿತ್ತು. ಕಾನೂನಿನ ಪ್ರಕಾರ ಅವರನ್ನು ಗಲ್ಲಿಗೇರಿಸಬೇಕಿತ್ತು. ಕಾನೂನನ್ನು ಅವರ ಕೈಗೆತ್ತಿಕೊಂಡರೆ ಕಾನೂನು ಮತ್ತು ನ್ಯಾಯಾಲಯದ ಅಗತ್ಯ ಏಕೆ? ಎಂದು ಪ್ರಶ್ನಿಸಿದ್ದಾರೆ.