ಅಪ್ರಾಪ್ತೆಗೆ ಕಿರುಕುಳ ಆರೋಪ ; ಕೆಸಿಆರ್ ಪಕ್ಷದ ನಾಯಕ ಅರೆಸ್ಟ್…

44
firstsuddi

ಹೈದರಾಬಾದ್ : ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಾರತೀಯ ರಾಷ್ಟ್ರೀಯ ಸಮಿತಿಯ (ಬಿಆರ್‍ಎಸ್) ಸ್ಥಳೀಯ ಮುಖಂಡನೊಬ್ಬನನ್ನು ಪೊಲೀಸರು ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷದ ನಾಯಕ, ಆರೋಪಿ ಅಖೀಲ್ ಅಹ್ಮದ್ 10 ವರ್ಷದ ಬಾಲಕಿಗೆ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.

ವರದಿಗಳ ಪ್ರಕಾರ ಭಾನುವಾರ ಘಟನೆ ನಡೆದಿದೆ. 10 ವರ್ಷದ ಬಾಲಕಿ ಮೆಡಿಕಲ್ ಶಾಪ್ ಗೆ ಹೋಗಿದ್ದಾಗ ಅಲ್ಲಿ ಅಖೀಲ್ ಅಹ್ಮದ್ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಬಳಿಕ ಬಾಲಕಿ ತನ್ನ ಮನೆಗೆ ಬಂದು ಪೋಷಕರಲ್ಲಿ ನಡೆದ ಘಟನೆ ತಿಳಿಸಿದ್ದಾಳೆ. ಈ ಬಗ್ಗೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.