ಅಪ್ರಾಪ್ತ ಬಾಲಕಿ ಮೇಲೆ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ “ಸಾವಿರ ಸಹೋದರಿಯರ ಸಹೋದರ”…

425
firstsuddi

ಭೋಪಾಲ್ : 11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾವಿರ ಸಹೋದರಿಯ ಸಹೋದರ ಎಂದು ಘೋಷಿಸಿಕೊಂಡಿದ್ದ ಕಾರ್ಪೋರೇಟರ್ ರಾಜೇಂದ್ರ ಸಿಂಗ್ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಬೇತುಲದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜೇಂದ್ರಸಿಂಗ್ ಪ್ರತಿ ವರ್ಷ ರಕ್ಷಾಬಂಧನವನ್ನು ಅದ್ದೂರಿಯಾಗಿ ಆಚರಿಸಿ ತನ್ನನ್ನು ತಾನು ಸಾವಿರ ಸಹೋದರಿಯರ ಸಹೋದರ ಎಂದು ಘೋಷಿಸಿಕೊಂಡಿದ್ದರು. ಝಾಕಿರ್ ಹುಸೇನ್ ವಾರ್ಡ್ ಕಾರ್ಪೋರೇಟರ್ ಆಗಿದ್ದ ಆರೋಪಿ ಒಂದು ವರ್ಷದಿಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಪರಿಣಾಮ ಕೆಟ್ಟದಾಗಿರುತ್ತದೆ ಎಂದು ಬೆದರಿಕೆ ಹಾಕಿದ್ದನು. ಆದರೆ ಬೇರೆ ವ್ಯಕ್ತಿಯೊಬ್ಬರು ಪೊಲೀಸರಿಗೆ ಇದರ ಬಗ್ಗೆ ಪತ್ರ ಬರೆಯುವ ಮೂಲಕ ಆರೋಪಿಯ ಕೃತ್ಯವನ್ನು ತಿಳಿಸಿದ್ದು, ಬಳಿಕ ಪೊಲೀಸರು ಅತ್ಯಾಚಾರಕ್ಕೆ ಒಳಗಾಗಿದ್ದ ಬಾಲಕಿಯನ್ನು ವಿಚಾರಿಸಿದಾಗ ಅತ್ಯಾಚಾರ ಎಸಗಿರುವುದು ಖಚಿತವಾಗಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದ್ದಾಳೆ. ಬಳಿಕ ಪೊಲೀಸರು ಆರೋಪಿ ರಾಜೇಂದ್ರ ಸಿಂಗ್ ಅವರನ್ನು ಬಂಧಿಸಿದ್ದಾರೆ.