ಮುಂಬೈ : ಭಾರತ ಕ್ರಿಕೆಟ್ ತಂಡದ ಆಟಗಾರ ಅಂಬಾಟಿ ರಾಯುಡು ಎಲ್ಲಾ ಮಾದರಿಯ ಪಂದ್ಯಗಳಿಗೆ ವಿದಾಯ ಹೇಳಿದ್ದಾರೆ. ಈ ಬಾರಿಯ ವಿಶ್ವಕಪ್ ಪಂದ್ಯದಲ್ಲಿ ಸ್ಥಾನ ಸಿಗದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅಂಬಾಟಿ ರಾಯುಡು ಅವರು ಬಿಸಿಸಿಐಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಶ್ವಕಪ್ ಪಂದ್ಯದಲ್ಲಿ ಗಾಯಗೊಂಡು ಹೊರನಡೆದ ಶಿಖರ್ ಧವನ್ ಅವರ ಬದಲು ಅಂಬಾಟಿ ರಾಯುಡು ಅವರನ್ನು ಕರೆತರುವುದಾಗಿ ವರಧಿಯಾಗಿತ್ತು. ಆದರೆ ರಿಷಬ್ ಪಂತ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಬಳಿಕ ವಿಜಯ್ ಶಂಕರ್ ಅವರು ಗಾಯಗೊಂಡು ಹೊರನಡೆದ ಬಳಿಕ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆಮಾಡಲಾಗಿತ್ತು. ಈ ಬಗ್ಗೆ ಬೇಸರಗೊಂಡ ಅಂಬಾಟಿ ರಾಯುಡು ಅವರು ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ. ಅಂಬಾಟಿ ರಾಯುಡು ಅವರು ಭಾರತ ತಂಡದ ಪರ 55 ಏಕದಿನ ಪಂದ್ಯಗಳನ್ನು ಆಡಿದ್ದು, 3ಶತಕ ಹಾಗೂ 10ಅರ್ಧಶತಕ ಸಹಿತ1694 ರನ್ ಗಳಿದ್ದಾರೆ. ಏಕದಿನ ಅಂತರಾಷ್ಟ್ರೀಯ ಪಂದ್ಯಗಳು ಹಾಗೂ ಟಿ20 ಪಂದ್ಯಗಳಿಗೆ ಹೆಚ್ಚಿನ ಗಮನ ಹರಿಸಲು ಕಳೆದ ವರ್ಷ ಪ್ರಥಮದರ್ಜೆ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು.










