ಮುಂಬೈ : ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ಮಾಹಿ ಗಿಲ್ ಅವರು ನನಗೆ ಮದುವೆಯಾಗದೆ ಮೂರು ವರ್ಷದ ಮಗಳಿದ್ದಾಳೆ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ನಾನು ಲಿವಿಂಗ್ ಟುಗೆದರ್ ನಲ್ಲಿದ್ದೇನೆ. ಅಲ್ಲದೆ ನನಗೆ ಮೂರು ವರ್ಷದ ಮಗಳು ಇದ್ದಾಳೆ. ಆದರೆ ನಾನಿನ್ನು ಮದುವೆಯಾಗಿಲ್ಲ. ನನಗೆ ಯಾವಾಗ ಮದುವೆಯಾಗಬೇಕು ಅನ್ನಿಸುತ್ತದೆಯೋ ಆಗ ನಾನು ಮದುವೆಯಾಗುತ್ತೇನೆ. ಮದುವೆ ಎಂಬುವುದು ಒಂದು ಸುಂದರ ವಿಷಯ ಆದರೆ ಅದು ನನ್ನ ವೈಯಕ್ತಿಕ ನಿರ್ಧಾರ ನನಗೆ ಯಾವಾಗ ಮದುವೆಯಾಗಲು ಮನಸು ಬರುತ್ತದೋ ಆಗ ನಾನು ಮದುವೆಯಾಗುತ್ತೇನೆ. ಮದುವೆಯಾಗಿ ಏನೂ ಮಾಡಬೇಕು? ಮದುವೆಯಾಗದೆ ನಾನು ಮಕ್ಕಳು ಮಾಡಿಕೊಳ್ಳುವುದಕ್ಕೆ ಯಾವುದೇ ತೊಂದರೆಯಿಲ್ಲ. ಅಲ್ಲದೆ ನಾನು ಅವಿವಾಹಿತ ಎಲ್ಲ ಮಕ್ಕಳ ತಾಯಿ ಆಗಲು ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.










