ಅಭಿಮಾನಿಗಳಿಗೆ ಓಪನ್ ಚಾಲೆಂಜ್ ನೀಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್…

516
firstsuddi

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಬೆಳಿಗ್ಗೆ ತಮ್ಮ ಟ್ವಿಟರ್ ನಲ್ಲಿ ಒಬ್ಬ ಸೆಲೆಬ್ರಿಟಿಗೆ ಇನ್ನೊಬ್ಬ ಸೆಲೆಬ್ರಿಟಿ ಓಪನ್ ಚಾಲೆಂಜ್, ಇಂದು ಮಧ್ಯಾಹ್ನ ಫೇಸ್‍ಬುಕ್ ಲೈವ್ ಬರುತ್ತೇನೆ ಆಗಾ ಎಲ್ಲಾನು ಹೇಳುತ್ತೇನೆ ಎಂದು ಬರೆದುಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. ಇದೀಗ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ದು, ನನ್ನನ್ನು ನಾಡಿನ ಜನತೆ ಸೆಲೆಬ್ರಿಟಿ ಎಂದು ಕರೆಯುತ್ತೀರಿ. ಆದರೆ ನನಗೆ ನನ್ನ ಅಭಿಮಾನಿಗಳೇ ಸೆಲೆಬ್ರಿಟಿಗಳು.

firstsuddi

ಕುರುಕ್ಷೇತ್ರ ಚಿತ್ರ ಬಿಡುಗಡೆ ಆಗಲಿದ್ದು, ಈ ಚಿತ್ರ ರವಿಚಂದ್ರನ್, ಅರ್ಜುನ್ ಸರ್ಜಾ, ಅಪ್ಪಾಜಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೊಡ್ಡ ತಾರಾಬಳಗವೇ ಹೊಂದಿದೆ. ಹೀಗಾಗಿ ಟಿಕೆಟ್‍ನಲ್ಲಿ ನನ್ನ ಫೋಟೋ ಹಾಕಿಲ್ಲ ಹಾಗೂ ಕಟೌಟ್ ಹಾಕಿಲ್ಲ ಎಂದು ಬೇಜಾರು ಮಾಡಿಕೊಳ್ಳಬೇಡಿ. ನನಗೆ ಯಾವಾ ಗೌರವ ಕೊಡುತ್ತೀರೋ ಅದೇ ಗೌರವ ಚಿತ್ರದ ಎಲ್ಲಾ ಕಲಾವಿದರಿಗೂ ನೀಡಬೇಕು. ಕರ್ಣ, ದುರ್ಯೋದನ ಹಾಗೂ ಅರ್ಜುನನ್ನು ಹೇಗೆ ಕಾಣುತ್ತೀರ ಎಂಬುವುದು ನನ್ನ ಅಭಿಮಾನಿಗಳಿಗೆ ನನ್ನ ಓಪನ್ ಚಾಲೆಂಜ್ ಎಂದು ಹೇಳಿದ್ದಾರೆ.