ಅಮಿತ್ ಶಾ ಈ ಕೆಲಸ ಮೊದಲೇ ಮಾಡಿದ್ದರೆ ಎಂವಿಎ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ: ಉದ್ಧವ್ ಠಾಕ್ರೆ.

62
firstsuddi

ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಉದ್ಧವ್ ಠಾಕ್ರೆ ಶಿವಸೇನೆ-ಬಿಜೆಪಿ ಮೈತ್ರಿಯ 2.5 ವರ್ಷಗಳ ಅವಧಿಯಲ್ಲಿ ಶಿವಸೇನೆ ಮುಖ್ಯಮಂತ್ರಿಯಾಗಿರಬೇಕೆಂದು ನಾನು ಅಮಿತ್ ಶಾಗೆ ಮೊದಲೇ ಹೇಳಿದ್ದೆ. ಅವರು ಆ ಮಾತನ್ನು ಮೊದಲೇ ನಡೆಸಿಕೊಟ್ಟಿದ್ದರೆ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದಿದ್ದಾರೆ.

2019 ರಲ್ಲಿ ಬಿಜೆಪಿಯೊಂದಿಗಿನ ತಮ್ಮ ಪಕ್ಷದ 25 ವರ್ಷಗಳ ಮೈತ್ರಿಯನ್ನು ಕೊನೆಗೊಳಿಸಿದ ಕಾರಣವನ್ನು ಉಲ್ಲೇಖಿಸಿದ್ದಾರೆ. ಸರ್ಕಾರ ರಚನೆಯಾದ ರೀತಿ ಮತ್ತು ಶಿವಸೇನಾ ಕಾರ್ಯಕರ್ತ ಎಂದು ಕರೆಸಿಕೊಳ್ಳುವವರನ್ನು ಸಿಎಂ ಮಾಡಿದ್ದನ್ನು ನೋಡಿದೆವು. ಅಮಿತ್ ಶಾ ಅವರಿಗೂ ಹಿಂದೆ ಅದನ್ನೇ ಹೇಳಿದ್ದೆ. ಈ ಕೆಲಸವನ್ನು ಅಮಿತ್ ಶಾ ಈ ಹಿಂದೆ ಗೌರವಯುತವಾಗಿ ಮಾಡಬಹುದಿತ್ತು. ಹಾಗೆ ಮಾಡಿದ್ದರೆ ಶಿವಸೇನೆ ಅಧಿಕೃತವಾಗಿ ನಿಮ್ಮೊಂದಿಗಿರುತ್ತಿತ್ತು. ಏಕನಾಥ್ ಶಿಂಧೆ ಶಿವಸೇನಾ ಸಿಎಂ ಅಲ್ಲ ಎಂದು ಎಂದು ಹೇಳಿದ್ದಾರೆ.

ನಾನು ರಾಜೀನಾಮೆ ನೀಡಿದ ಬಳಿಕ ನನಗೆ ಜನರಿಂದ ಅಪಾರ ಪ್ರೀತಿಪೂರ್ವಕ ಸಂದೇಶಗಳು ಬಂದಿವೆ. ಯಾವುದೇ ಕಾರಣಕ್ಕೂ ನನ್ನ ಮೇಲಿನ ಕೋಪವನ್ನು ಜನರ ಮೇಲೆ ತೋರಿಸಬೇಡಿ. ಮೆಟ್ರೋ ಕಾರ್ ಶೆಡ್ನ ಪ್ರಸ್ತಾಪ ಬದಲಾಯಿಸಬೇಡಿ ಎಂದು ಇದೇ ವೇಳೆ ಶಿಂಧೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಶಿಂಧೆ ಅಧಿಕಾರ ಸ್ವೀಕಾರ ಮಾಡ್ತಿದ್ದಂತೆ ಮೆಟ್ರೋ ಕಾರ್ ಶೆಡ್ ಯೋಜನೆ ಬದಲಾಯಿಸಲು ಮುಂದಾಗಿದ್ದಾರೆ.