ಅಮೆರಿಕದಲ್ಲಿ ಮೂರು ಪ್ರತ್ಯೇಕ ಗುಂಡಿನ ದಾಳಿ – 9 ಮಂದಿ ಸಾವು…

50
firstsuddi

ವಾಷಿಂಗ್ಟನ್ : ನಿನ್ನೆ ದೇಶದಲ್ಲಿ ನಡೆದ ಮೂರು ಪ್ರತ್ಯೇಕ ಗುಂಡಿನ ದಾಳಿ ಪ್ರಕರಣಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದ ಕರಾವಳಿ ಪ್ರದೇಶದಲ್ಲಿರುವ ಅಣಬೆ ಫಾರ್ಮ್ ಮತ್ತು ಟ್ರಕ್ಕಿಂಗ್ ಘಟಕದಲ್ಲಿ ಮೊದಲೆರಡು ಘಟನೆಗಳು ನಡೆದಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪೈಕಿ ನಾಲ್ವರು ಫಾರ್ಮ್‍ನಲ್ಲಿ ಹತ್ಯೆಯಾಗಿದ್ದು, ಇನ್ನು ಮೂವರು ಟ್ರಕ್ಕಿಂಗ್ ವ್ಯವಹಾರ ಮಾಡುವ ಹಾಫ್ ಮೂನ್ ಬೇ ಹೊರಭಾಗದ ಘಟಕದಲ್ಲಿ ಸಾವಿಗೀಡಾಗಿದ್ದಾರೆ. ಘಟನೆ ನಡೆದ ಈ ನಗರವು ದಕ್ಷಿಣ ಸ್ಯಾನ್ ಫ್ರಾನ್ಸಿಸ್ಕೋದಿಂದ ಅಂದಾಜು 48 ಕಿ.ಮೀ ದೂರದಲ್ಲಿದೆ. ಈ ಎರಡು ಘಟನೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಅಯೋವಾ ರಾಜ್ಯದ ಡೆಸ್ ಮೊಯಿನ್ಸ್ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಅಸುನೀಗಿದ್ದಾರೆ. ಈ ಘಟನೆಯೂ ನಿನ್ನೆ ನಡೆದಿದೆ. ಶಾಲೆಯ ಉದ್ಯೋಗಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.