ಅವಿವಾಗೆ ಮಾಂಗಲ್ಯಧಾರಣೆ ಮಾಡಿದ ಅಭಿಷೇಕ್ ಅಂಬರೀಷ್.

64
firstsuddi

ಇಂದು ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಅವರು ಅವಿವಾಗೆ ಮಾಂಗಲ್ಯಧಾರಣೆ ಮಾಡಿದರು. ಫ್ಯಾಷನ್ ಡಿಸೈನರ್ ಅವಿವಾ ಬಿಡಪ ಜೊತೆ ಅಭಿಷೇಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂದು ಬೆಳಗ್ಗೆ 9:30 ರಿಂದ 10:30 ವರೆಗೆ ನಡೆದ ಮುಹೂರ್ತದಲ್ಲಿ ಅಭಿಷೇಕ್ ಮತ್ತು ಅವಿವಾ ಪತಿ-ಪತ್ನಿಯರಾದರು. ಅಭಿ ಮತ್ತು ಅವಿವಾ ಮದುವೆಗೆ ಕುಟುಂಬಸ್ಥರು ಹಾಗೂ ಆತ್ಮೀಯರು ಭಾಗಿಯಾಗಿದ್ದರು. ಚಿತ್ರರಂಗದ ಗಣ್ಯರು ಸಹ ಹಾಜರಾಗಿ ಶುಭಹಾರೈಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು ಸೇರಿದಂತೆ ಬೇರೆ ಭಾಷೆಯ ಅನೇಕ ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ.

ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.