ನವದೆಹಲಿ : ಡಿಸ್ಕವರಿ ಚಾನಲ್‍ನಲ್ಲಿ ಪ್ರಸಾರವಾಗುವ “ಮ್ಯಾನ್ ವರ್ಸಸ್ ವೈಲ್ಡ್” ಎಂಬ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಕಾರ್ಯಕ್ರಮದ ಹೋಸ್ಟ್ ಬೈರ್ ಗ್ರಿಲ್ಸ್ ಅವರು ಟ್ವೀಟ್ ಮೂಲಕ ತಿಳಿಸಿದ್ದು, “ ಸುಮಾರು 180 ದೇಶಗಳ ಜನರು ಇದುವರೆಗೂ ಕಾಣದ ಮೋದಿಯವರನ್ನು ನೋಡುತ್ತಾರೆ. ಪ್ರಾಣಿಗಳ ಸಂರಕ್ಷಣೆ, ಮತ್ತು ಪರಿಸರ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಆಗಸ್ಟ್ 12ರಂದು ರಾತ್ರಿ 9ಗಂಟೆಗೆ ಮ್ಯಾನ್ ವರ್ಸಸ್ ವೈಲ್ಡ್ ವಿಥ್ ನರೇಂದ್ರ ಮೋದಿ ನೋಡಿ ಎಂದು ಬರೆದು ವೀಡಿಯೋ ಹಾಕಿ ಟ್ವೀಟ್ ಮಾಡಿದ್ದು, ಉತ್ತರಾಖಂಡ್‍ನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಬೈರ್ ಗ್ರಿಲ್ಸ್ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 12ರಂದು ರಾತ್ರಿ 9ಗಂಟೆಗೆ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.










