ಸ್ಯಾಂಡಲ್ವುಡ್ನ ಖ್ಯಾತ ಕಲಾವಿದರಾದ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 24ರಂದು ಇವರಿಬ್ಬರು ಹಸೆ ಮಣೆ ಏರಿಲಿದ್ದಾರೆ.
ಮೊನ್ನೆಯಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಶಾಸ್ತ್ರ ಸರಳವಾಗಿ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆಯಲ್ಲಿ ಈ ಜೋಡಿಯ ಆತ್ಮೀಯರು, ಸಿನಿಮಾ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.
ಮದುವೆ ಆಮಂತ್ರಣ ಪತ್ರಿಕೆ ಕೂಡ ಸಿದ್ಧವಾಗಿದ್ದು, ಕೊಡಗು ಭಾಷೆಯಲ್ಲೇ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಕೊಡಗು ಸಂಪ್ರದಾಯದಂತೆಯೇ ಇಬ್ಬರೂ ಮದುವೆ ಆಗುತ್ತಿದ್ದು, ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲೇ ನಡೆಯಲಿವೆ. ಭುವನ್ ಮತ್ತು ಹರ್ಷಿಕಾ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಒಟ್ಟಿಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದ್ದರು.
ಹರ್ಷಿಕಾ ಪೂಣ್ಣಚ್ಚ ಮತ್ತು ಭುವನ್ ಪೊನ್ನಣ್ಣ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಬ್ಬರೂ ಜೊತೆಯಾಗಿ ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಕೊವಿಡ್ ಲಾಕ್ಡೌನ್ ಸಂದರ್ಭದಲ್ಲಿ ಅನೇಕರಿಗೆ ಅವರು ನೆರವು ನೀಡಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಅನೇಕ ಬಾರಿ ಗಾಸಿಪ್ ಹಬ್ಬಿತ್ತು. ಆದರೆ ಆ ಕುರಿತು ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ಅವರಿಬ್ಬರು ವೈವಾಹಿಕ ಜೀವನ ಆರಂಭಿಸುವ ಸಿದ್ಧತೆಯಲಿದ್ದಾರೆ. ಎರಡೂ ಕುಟುಂಬಗಳು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿವೆ.










