ಆನಂದ್ ಸಿಂಗ್ ಎಲ್ಲ ವಿಚಾರ ನನಗೆ ಹೇಳಿದ್ದಾರೆ, ಅವರನ್ನು ಕರೆದು ಮಾತನಾಡುತ್ತೇನೆ : ಸಿಎಂ ಬೊಮ್ಮಾಯಿ.

80
firstsuddi

ಬೆಂಗಳೂರು : ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಸಚಿವ ಆನಂದ್ ಸಿಂಗ್ ನನಗೆ ಮೂರು ದಶಕದ ಗೆಳೆಯ ಅವರ ಜೊತೆ ನಿನ್ನೆ ಮಾತಾಡಿದ್ದೀನಿ. ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಜೊತೆ ಮಾತಾಡ್ತೀನಿ. ಆನಂದ್ ಸಿಂಗ್ ರಾಜೀನಾಮೆಯಂತಹ ಯಾವುದೇ ದಾರಿ ಹಿಡಿಯಲ್ಲ. ಎಲ್ಲವೂ ಅಂತಿಮವಾಗಿ ಸರಿಯಾಗಲಿದೆ. ಆನಂದ್ ಸಿಂಗ್ ಎಲ್ಲ ವಿಚಾರಗಳನ್ನು ನನಗೆ ಹೇಳಿದ್ದಾರೆ. ನಾನು ಅದನ್ನ ಚರ್ಚೆ ಮಾಡುತ್ತಿದ್ದೇನೆ. ಮತ್ತೆ ಅವರನ್ನು ಕರೆದು ಮಾತನಾಡುತ್ತೇನೆ. ಅವರ ಬಳಿ ಮಾತನಾಡುವುದು ಇನ್ನೂ ಇದೆ. ಎಲ್ಲವನ್ನು ಮಾತುಕತೆ ನಡೆಸಿ ನಿರ್ಧರಿಸಲಾಗುತ್ತದೆ. ನಾನು ಅವರ ಬಳಿ ಮಾತನಾಡಿದ ಮೇಲೆಯೇ ಮುಂದಿನ ನಿರ್ಧಾರವಾಗಲಿದೆ ಎಂದರು.

ಆನಂದ್ ಸಿಂಗ್ ಅವರು ಯಾವಾಗಲಾದರೂ ಬಂದು ಭೇಟಿ ಮಾಡಲಿ. ಅವರ ಜೊತೆ ನಾನು ಚರ್ಚೆ ಮಾಡಲು ಸಿದ್ಧನಿದ್ದೇನೆ. ಈ ವಿಚಾರ ಕುರಿತು ಹೈಕಮಾಂಡ್ ಬಳಿ ಯಾವುದೇ ಮಾತುಕತೆ ನಡೆದಿಲ್ಲ. ಮೊದಲು ಸಚಿವ ಆನಂದ್ ಸಿಂಗ್ ಬರಲಿ, ಬಂದ ನಂತರ ಮಾತನಾಡುತ್ತೇನೆ. ಎಲ್ಲ ಸರಿಯಾಗಲಿದೆ ಎಂದು ಹೇಳಿದರು.