ಆಯತಪ್ಪಿದ ಸೋಮಣ್ಣನನ್ನ ಹಿಡಿದೆತ್ತಿದ ಕಿಚ್ಚ ಸುದೀಪ್.

56
firstsuddi

ಚಾಮರಾಜನಗರ: ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ನಟ ಸುದೀಪ್ ಅವರು ಇಂದು ರೋಡ್ ಶೋ ನಡೆಸಿದರು. ಪ್ರಚಾರದ ವೇಳೆ ಕಾರಿನ ಮೇಲೆ ನಿಂತಿದ್ದ ಸೋಮಣ್ಣ ಆಯತಪ್ಪಿ ಬೀಳುತ್ತಿದ್ದಾಗ ಸುದೀಪ್ ಕೈ ಹಿಡಿದು ಮೇಲಕ್ಕೆತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಪರ ಪ್ರಚಾರಕ್ಕೆ ಕಿಚ್ಚ ಸುದೀಪ್ ಚಾಮರಾಜನಗರಕ್ಕೆ ಆಗಮಿಸಿದ್ದು, ಈ ವೇಳೆ ಸುದೀಪ್ ನೋಡಲು ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಸೇರಿದ್ದು, ನೂಕುನುಗ್ಗಲು ಉಂಟಾಗಿದೆ. ಸೋಮಣ್ಣ ಸಹ ಸುದೀಪ್ ಜೊತೆ ಕಾರಿನ ಮೇಲೆ ನಿಂತಿಕೊಂಡು ಜನರತ್ತ ಕೈ ಬೀಸುತ್ತಿದ್ದಾಗ ಅಭಿಮಾನಿಯೊಬ್ಬರು ದಿಢೀರ್ ಕಾರಿನ ಮೇಲೆ ಬಂದು ಸೋಮಣ್ಣ ಅವರನ್ನು ಹಿಡಿದುಕೊಂಡಿದ್ದಾರೆ. ಇದರಿಂದ ಸೋಮಣ್ಣ ಆಯತಪ್ಪಿ ಕಾರಿನ ಮೇಲೆಯೇ ಬಿದ್ದಿದ್ದಾರೆ. ಕೂಡಲೇ ಕಾರ್ಯಕರ್ತರು ಸೋಮಣ್ಣ ಅವರನ್ನು ಹಿಡಿದುಕೊಂಡರು. ಅಲ್ಲದೇ ಸುದೀಪ್ ಸಹ ಸೋಮಣ್ಣ ಅವರ ಸಹಾಯಕ್ಕೆ ಧಾವಿಸಿದರು.

ಅಬ್ಬರದ ಪ್ರಚಾರದಲ್ಲಿ ನಟ ಸುದೀಪ್‌ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಸಂತೇಮರಹಳ್ಳಿಯ ವೃತ್ತದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ.