ಆರ್‌ಬಿಐ ನೂತನ ಗವರ್ನರ್ ಆಗಿ ಸಂಜಯ ಮಲ್ಹೋತ್ರಾ ಅಧಿಕಾರ ಸ್ವೀಕಾರ.

41

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‍ನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಇಂದು ಅಧಿಕಾರ ಸ್ವೀಕರಿಸಿದರು. ಇಂದು ಬೆಳಗ್ಗೆ ಆರ್‌ಬಿಐನ ಪ್ರಧಾನ ಕಚೇರಿಗೆ ಆಗಮಿಸಿದ ಮಲ್ಹೋತ್ರಾ ಅವರನ್ನು ಕಚೇರಿಯ ಹಿರಿಯ ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿದರು. ಮಲ್ಹೋತ್ರಾ ಅವರ ನೇಮಕಾತಿಯ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಆರ್‌ಬಿಐ ಮಾಹಿತಿ ನೀಡಿದ್ದು, ಕೆಲ ಪೆÇೀಟೊಗಳನ್ನು ಕೂಡ ಶೇರ್ ಮಾಡಿದೆ. ಸಂಜಯ್ ಮಲ್ಹೋತ್ರಾ ಅವರು 2024ರ ಡಿಸೆಂಬರ್ 11 ರಿಂದ ಮುಂದಿನ 3 ವರ್ಷಗಳವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 26 ನೇ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು  ಎಂದು ಆರ್‌ಬಿಐ ಪೋಸ್ಟ್ ಮಾಡಿದೆ. ಇತ್ತೀಚಿನವರೆಗೆ ಕಂದಾಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಲ್ಹೋತ್ರಾ, ಆರ್‍ಬಿಐನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಲು ಇಂದು ಅಗತ್ಯ ದಾಖಲೆಗಳಿಗೆ ಸಹಿ ಹಾಕಿದರು. ಉಪ ಗವರ್ನರ್‍ಗಳಾದ ಸ್ವಾಮಿನಾಥನ್ ಜೆ, ಎಂ ರಾಜೇಶ್ವರ್ ರಾವ್ ಮತ್ತು ಟಿ ರಬಿ ಶಂಕರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.