ಆರ್‍ಎಸ್‍ಎಸ್ ಕಾರ್ಯಕರ್ತ, ಗರ್ಭಿಣಿ ಪತ್ನಿ ಹಾಗೂ 6ವರ್ಷದ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು…

789
firstsuddi

ಕೊಲ್ಕತ್ತಾ : ಆರ್‍ಎಸ್‍ಎಸ್ ಕಾರ್ಯಕರ್ತ ಮತ್ತು ಅವರ ಪತ್ನಿ ಹಾಗೂ 6ವರ್ಷದ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡದಿದೆ. ಪ್ರಕಾಶ್ ಪಾಲ್(35) ಪತ್ನಿ ಬ್ಯೂಟಿ ಪಾಲ್(28) ಹಾಗೂ ಅಂಗನ್ ಪಾಲ್(6) ಮೃತ ದುರ್ದೈವಿಗಳು ಎನ್ನಲಾಗಿದ್ದು, ಪ್ರಕಾಶ್ ಅವರು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಆರ್‍ಎಸ್‍ಎಸ್ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದರು. ಪ್ರಕಾಶ್ ಪಾಲ್ ಅವರ ಕುಟುಂಬ ಮುರ್ಷಿದಾಬಾದ್ ನಗರದ ಜಿಯಾಗಂಜ್ ಬಡಾವಣೆಯಲ್ಲಿ ವಾಸವಾಗಿತ್ತು. ಪ್ರಕಾಶ್ ಅವರು ಮಾರುಕಟ್ಟೆಯಿಂದ ಬಂದ ಕೆಲವೇ ಗಂಟೆಯಲ್ಲಿ ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕೊಲೆಗೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.