ಆಲಿಯಾ ಭಟ್ ತಾತ ನಿಧನ…

71
firstsuddi

ಹೆಸರಾಂತ ಬಾಲಿವುಡ್ ನಟಿ ಆಲಿಯಾ ಭಟ್ ಅವರ ತಾತ ನರೇಂದ್ರ ರಜ್ದಾನ್ ಇಂದು ನಿಧನರಾಗಿದ್ದಾರೆ.

ಆಲಿಯಾ ಭಟ್ ಅವರ ತಾತ ನರೇಂದ್ರ ರಜ್ದಾನ್, ಲಂಗ್ ಇನ್ ಫೆಕ್ಷನ್ ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆರೋಗ್ಯ ಸ್ಥಿತಿ ಕ್ರಿಟಿಕಲ್ ಆದ ಕಾರಣದಿಂದಾಗಿ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಹಲವು ದಿನಗಳ ಹಿಂದೆ ತಾತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅರಿತು ವಿದೇಶ ಪ್ರಯಾಣದ ಸಿದ್ಧತೆಯಲ್ಲಿದ್ದ ಆಲಿಯಾ, ಪ್ರವಾಸವನ್ನು ರದ್ದು ಮಾಡಿಕೊಂಡಿದ್ದರು. ಇನ್ನೇನು ವಿಮಾನ ಏರ ಬೇಕಿದ್ದ ಆಲಿಯಾಗೆ ತಾತನ ಆರೋಗ್ಯ ಸ್ಥಿತಿ ತಿಳಿಯುತ್ತಿದ್ದಂತೆಯೇ ಏರ್ ಪೋರ್ಟ್ ನಿಂದ ಅವರು ವಾಪಸ್ಸಾಗಿದ್ದರು.

ಆಲಿಯಾ ಭಟ್ ತಾತ ನರೇಂದ್ರ ಅವರ ನಿಧನದ ಸುದ್ದಿ ತಿಳಿದು ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.