ಆಹಾರ ಸೇವಿಸದೇ ನಿರಂತರವಾಗಿ ಪಬ್‍ಜಿ ಆಟವಾಡುತ್ತಿದ್ದ ಬಾಲಕ ಸಾವು…

151
firstsuddi

ಹೈದರಾಬಾದ್ : ಊಟ ನೀರು ಸೇವಿಸದೇ ನಿರಂತರವಾಗಿ ಪಬ್‍ಜಿ ಆಟವಾಡುತ್ತಿದ್ದ ಬಾಲಕ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಆಗಿರುವ ಹಿನ್ನೆಲೆ, ಮನೆಯಲ್ಲೇ ಇದ್ದ 16 ವರ್ಷದ ಬಾಲಕ ಊಟ ನೀರು ಸೇವಿಸದೇ ನಿರಂತರವಾಗಿ ಪಬ್‍ಜಿ ಆಟವಾಡುತ್ತಿದ್ದ. ಇದರಿಂದ ಬಾಲಕ ಅನಾರೋಗ್ಯಕ್ಕೆ ತುತ್ತಾಗಿದ್ದು, ಬಳಿಕ ಬಾಲಕನ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.