ರಾಯಚೂರು: ಇಂಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಹೇಬ್ರು ಒಬ್ಬರೇ ಸ್ಟಾರ್ ಪ್ರಚಾರಕರು, ಎಲ್ಲಾ ಪಾರ್ಟಿ ಪ್ರಚಾರನೂ ಅವರಿಗೆ ಕೊಟ್ಟು ಬಿಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ರಾಯಚೂರಿನಲ್ಲಿ ನಡೆದ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಂತರ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರ ಲಿಸ್ಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಇಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾನ್ಯವಾಗಿ ಬೇರೆ ರಾಜ್ಯಕ್ಕೆ ಹೋಗಲ್ಲ. ಇಂಡಿಯಾದಲ್ಲಿ ಒಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ, ಅವರೇ ಪ್ರಧಾನಿ ನರೇಂದ್ರ ಮೋದಿ ಎಂದು ಹೇಳಿದರು. ಅವರಿಗೆ ಫುಲ್ ಟೈಂ ಇದೆ. ಒಂದೊಂದು ರಾಜ್ಯಕ್ಕೆ 30, 40 ಸಾರಿ ಬರೋಕೆ ಟೈಂ ಇದೆ. ಇಡೀ ದೇಶದಲ್ಲಿ, ರಾಜ್ಯಗಳಲ್ಲಿ ಓಡಾಡೋಕೆ, ಎಲ್ಲಾ ಚುನಾವಣೆ ಭಾಷಣ ಮಾಡಲು ಟೈಂ ಇದೆ. ಹಾಗಾಗಿ ಅವರೊಬ್ಬರೇ ಸ್ಟಾರ್ ಪ್ರಚಾರಕರು ಎಂದು ಹೇಳಿದರು.










