ಜಕಾರ್ತ: ಇಂಡೋನೇಷ್ಯಾದ ತನಿಂಬಾರ್ ಪ್ರದೇಶದಲ್ಲಿ ಇಂದು 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್‍ಸಿ)ತಿಳಿಸಿದೆ.
ಭೂಕಂಪವು ಭೂಮಿಯ ಮೇಲ್ಮೈಯಿಂದ 97 ಕಿಲೋಮೀಟರ್ (60.27 ಮೈಲುಗಳು) ಆಳದಲ್ಲಿದೆ ಎಂದು ಇಎಂಎಸ್‍ಸಿ ಹೇಳಿದೆ. ಭೂಕಂಪ ಸಂಭವಿಸಿದ ನಂತರ ಇಂಡೋನೇಷ್ಯಾ ಸುಮಾರು ಮೂರು ಗಂಟೆಗಳ ಕಾಲ ಸುನಾಮಿ ಎಚ್ಚರಿಕೆಯನ್ನು ನೀಡಿತ್ತು. ಆದರೆ ಸಮುದ್ರ ಮಟ್ಟದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ದಾಖಲಾದ ಹಿನ್ನಲೆ ಎಚ್ಚರಿಕೆಯನ್ನು ತೆಗೆದುಹಾಕಲಾಗಿದೆ.
ಕಳೆದ ವಾರ ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನದಲ್ಲೂ ಕ್ರಮವಾಗಿ 5.9 ಹಾಗೂ 5.8 ತೀವ್ರತೆಯ ಭೂಕಂಪನ ಉಂಟಾಗಿತ್ತು.










