ಬೆಂಗಳೂರು : ಇಂದಿನಿಂದ ವಿಧಾನ ಸಭೆ ಬಜೆಟ್ ಅಧಿವೇಶನ…

102
Firstsuddi

ಬೆಂಗಳೂರು : ಇಂದಿನಿಂದ ವಿಧಾನ ಸಭೆ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಸುಮಾರು 19 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ. ಮೊದಲ ಎರಡು ದಿನ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದ್ದು, ಮಾರ್ಚ್ 8 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2021-2022 ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.

ಅಧಿವೇಶನ ಕುರಿತು ಮಾಹಿತಿ ನೀಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಅಧಿವೇಶನದಲ್ಲಿ ಮೊದಲ 2 ದಿನ ಒಂದು ದೇಶ ಒಂದು ಚುನಾವಣೆ ಕುರಿತು ಚರ್ಚೆಗೆ ಅವಕಾಶ ಕೊಡಲಾಗಿದ್ದು, ವಿಧಾನ ಪರಿಷತ್ ನಲ್ಲಿ ಮೊದಲು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಕಾರ್ಯ ಕಲಾಪ ನಡೆಯುತ್ತದೆ. ಮಾ. 8ರಂದು ಬಜೆಟ್‌ ಮಂಡನೆಯಾಗಲಿದ್ದು, ಅನಂತರ ಮಾ. 31ರ ವರೆಗೆ ಬಜೆಟ್‌ ಮೇಲಿನ ಚರ್ಚೆ, ಸರಕಾರದ ಉತ್ತರ, ಪ್ರಶ್ನೋತ್ತರ ಕಲಾಪಗಳು ಇರಲಿವೆ ಎಂದು ಹೇಳಿದ್ದಾರೆ. ಈ ಚರ್ಚೆಯೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಬಗ್ಗೆ ಮಾತ್ರ ಇರಲಿದ್ದು, ರಾಜ್ಯ ಚುನಾವಣೆ ಆಯೋಗ ನಡೆಸುವ ಚುನಾವಣೆ ಬಗ್ಗೆ ಚರ್ಚೆ ಆಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತ ಕಲಾಪದಲ್ಲಿ ಪ್ರತಿಪಕ್ಷಗಳ ಕೈಗೆ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಸಿದ ಸಿಡಿ ಆರೋಪದ ವಿಚಾರವು ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ರಾಸಲೀಲೆ ಪ್ರಸ್ತಾಪ ಮಾಡಿ ಸರ್ಕಾರಕ್ಕೆ ಮುಜುಗರ ತರೋ ಪ್ಲ್ಯಾನ್ ಅನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಹೂಡಿವೆ.