ಕಳಸ :ಹಿಂದುಳಿದ ವರ್ಗಗಳು ಇಂತಹ ಸಂಘಟನೆಗಳ ಮೂಲಕ ಉತ್ತಮ ಕಾರ್ಯಗಳನ್ನು ಮಾಡುವುದರ ಮುಖಾಂತರ ತಮ್ಮ ಸಂಘಟನೆಗಳನ್ನು ಗಟ್ಟಿ ಮಾಡಿಕೊಂಡು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಹೇಳಿದರು.
ಕಳಸದಲ್ಲಿ ಇಂದು ನಡೆದ ಸವಿತಾ ಭಂಡಾರಿ ಸಮಾಜ ಮತ್ತು ಯಶಶ್ವಿ ಮಹಿಳಾ ಭಂಡಾರಿ ಸಂಘ ಕಳಸದ ವತಿಯಿಂದ ನಡೆದ ಅಂತರ್‍ಜಿಲ್ಲಾ ಸೂಪರ್ 8 ಆಹ್ವಾನಿತ ಟೆನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಯ ಸಮರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಕೆಲವೇ ಬೆರಳೆಣಿಕೆಯಲ್ಲಿರುವ ಭಂಡಾರಿ ಸಮಾಜ ಇಲ್ಲಿ ಅಧ್ಬುತ ಕಾರ್ಯಕ್ರಮಗಳನ್ನು ಮಾಡಿಕೊಂಡು ಅದರಲ್ಲಿ ತಮ್ಮ ಸಮಾಜ ಭಾಂದವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಮತ್ತು ಕೇವಲ ತಮ್ಮ ಸಮಾಜ ಭಾಂದವರಿಗೋಸ್ಕರ ಮಾತ್ರವಲ್ಲದೆ ತೀರ ಸಂಕಷ್ಟದಲ್ಲಿರುವ ಇತರರಿಗೂ ನೆರವಾಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಂಡಾರಿ ಸಮಾಜದ ಸದಸ್ಯರಾದ ಜಗದೀಶ್ ಭಂಡಾರಿ ಇವರು ಇಡಕಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಿನ್ನಲೆಯಲ್ಲಿ ಅವರನ್ನು ಗೌರವಿಸಲಾಯಿತು.ಸವಿತಾ ಭಂಡಾರಿ ಸಮಾಜದ ಸಮುದಾಯ ಭವನಕ್ಕೆ ನಿವೇಶನ ನೀಡಬೇಕು ಎಂದು ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಯಿತು.
ಸಮಾರೋಪ ಸಮಾರಂಭದ ಮುಂಚಿತವಾಗಿ ನಡೆದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಒಟ್ಟು ವಿವಿಧ ಜಿಲ್ಲೆಗಳಿಂದ 16 ತಂಡಗಳು ಬಾಗವಹಿಸಿದ್ದವು.ಇದರಲ್ಲಿ ಅಂತಿಮವಾಗಿ ರೆಡ್ ಬ್ಲಾಕ್ ಪೆರಿಯಾಲ ಕುಡ್ಲ ತಂಡ ವಿನ್ನರ್ ಮತ್ತು ಯುವ ವೇದಿಕೆ ಬೆಳ್ತಂಗಡಿ ರನ್ನರ್ ಆಗಿ ಹೊರಹೊಮ್ಮಿತ್ತು.
ಈ ಸಂದರ್ಭದಲ್ಲಿ ಸವಿತಾ ಭಂಡಾರಿ ಸಮಾಜದ ಅಧ್ಯಕ್ಷ ಮೋಹನ್ ಭಂಡಾರಿ,ಗೌರವಾಧ್ಯಕ್ಷ ಶ್ರೀಧರ ಭಂಡಾರಿ,ಮರಸಣಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಎ,ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜ್ವಾಲನಯ್ಯ,ಸವಿತಾ ಸಮಾಜದ ಮಾಜಿ ಅಧ್ಯಕ್ಷ ಸುರೇಶ ಭಂಡಾರಿ,ಸುರೇಶ್ ಭಂಡಾರಿ,ಅನಿಲ್ ಭಂಡಾರಿ,ಯಶಸ್ವಿ ಮಹಿಳಾ ಭಂಡಾರಿ ಸಂಘದ ಅಧ್ಯಕ್ಷೆ ವನಜ ಭಂಡಾರಿ,ಶಂಕರ ಭಂಡಾರಿ,ಸುಧೀರ್ ಯಳಂದೂರು,ಚರಣ್ ಭಂಡಾರಿ ಇತರರು ಇದ್ದರು.










