ಇಂದು ಅಂಬರೀಶ್ ಜನ್ಮದಿನ ; ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ, ಮಗ ಅಭಿಷೇಕ್.

98
firstsuddi

ಬೆಂಗಳೂರು : ಇಂದು ಸ್ಯಾಂಡಲ್ ವುಡ್ ನ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ 69ನೇ ಹುಟ್ಟುಹಬ್ಬ ಈ ಹಿನ್ನಲೆ ಅವರ ಸಮಾಧಿಗೆ ಸರಳವಾಗಿ ಪೂಜೆ ಸಲ್ಲಿಸಲಾಯಿತು.

ಅಂಬರೀಶ್ ಅವರು  ನಮ್ಮೊಂದಿಗೆ ಇದ್ದಿದ್ದರೆ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ನಮ್ಮೆಲ್ಲರನ್ನೂ ಅಗಲಿದ್ದಾರೆ. ಅಂಬರೀಶ್ ಇಲ್ಲದ ದಿನವನ್ನ ಅಭಿಮಾನಿಗಳು ಬಹಳ ಸಡಗರದಿಂದ ಆಚರಿಸಲು ಮುಂದಾಗಿದ್ದರು. ಆದರೆ ಈ ವರ್ಷವೂ ಕೊರೊನಾ ಅಡ್ಡಿ ಆಗಿದೆ. ಹೀಗಾಗಿ  ಅವರ ಪತ್ನಿ, ಸುಮಲತಾ ಅಂಬರೀಶ್, ಮಗ ಅಭಿಷೇಕ್ ಅಂಬರೀಶ್ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನ ಆಚರಿಸಿದ್ದಾರೆ.

ಕೋವಿಡ್ ಲಾಕ್ ಡೌನ್ ಹಿನ್ನೆಲೆ, ಕುಟುಂಬಸ್ಥರಿಗೆ ಮಾತ್ರ ಪೂಜೆಗೆ ಅವಕಾಶವಿದ್ದು, ಈ ಸಂದರ್ಭದಲ್ಲಿ ಅಂಬಿಯ ಆತ್ಮೀಯರಾದ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅಂಬರೀಶ್ ಆತ್ಮೀಯರು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದರು.

ಅಂಬಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಂಸದೆ ಸುಮಲತಾ ಅಂಬರೀಶ್ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಅಂಬರೀಶ್ ಅವರಿದ್ದಾಗ ಪ್ರತಿ ವರ್ಷ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಈ ವರ್ಷ ಕೊರೊನಾ ಕಾರಣದಿಂದ ಸಂಭ್ರಮದ ಆಚರಣೆ ಇಲ್ಲ ಎಂದಿದ್ದಾರೆ.