ಇಂದು ಚೆನ್ನೈಗೆ ಪ್ರಧಾನಿ ಮೋದಿ ಭೇಟಿ…

58
firstsuddi

ನವದೆಹಲಿ: ಜಪಾನ್ ಪ್ರವಾಸ ಮುಗಿಸಿ ಭಾರತಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚೆನ್ನೈಗೆ ಭೇಟಿ ನೀಡಲಿದ್ದಾರೆ.

ಸಂಜೆ 5.45ರ ಸುಮಾರಿಗೆ ಚೆನ್ನೈ ತಲುಪಲಿರುವ ಮೋದಿ ಅವರು, 31,400 ಕೋಟಿಯ ಒಟ್ಟು 11 ಯೋಜನೆಗಳಿಗೆ ಅವರು ಶಿಲನ್ಯಾಸ ಮಾಡಲಿದ್ದು, ಇದೇ ವೇಳೆ 2,900 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾಲ್ಕು ರೈಲ್ವೆ ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 910 ಕೋಟಿ ವೆಚ್ಚದಲ್ಲಿ 271 ಕಿಮೀ ಉದ್ದದ ತಿರುವಳ್ಳೂರು-ಬೆಂಗಳೂರು ಭಾಗದ ನೈಸರ್ಗಿಕ ಅನಿಲ ಪೈಪ್ ಲೈನ್ ಗೂ ಅವರು ಚಾಲನೆ ನೀಡಲಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 116 ಕೋಟಿ ವೆಚ್ಚದಲ್ಲಿ ಚೆನ್ನೈನ ಲೈಟ್ ಹೌಸ್ ಯೋಜನೆಯ ಭಾಗವಾಗಿ ನಿರ್ಮಿಸಲಾದ 1,152 ಮನೆಗಳನ್ನು ಅವರು ಉದ್ಘಾಟಿಸಲಿದ್ದಾರೆ.