ಇಂದು ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ…

82
firstsuddi

ನವದೆಹಲಿ : ದೇಶದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸತತವಾಗಿ ಏರಿಕೆ ಮಾಡಲಾಗುತ್ತಿದ್ದು, ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ ಗೆ 80 ಪೈಸೆ ಹೆಚ್ಚಿಸಲಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ  84 ಪೈಸೆ ಹೆಚ್ಚಾಗಿದ್ದು, 110.25ಕ್ಕೆ ಮಾರಾಟವಾಗುತ್ತಿದೆ. ಡೀಸೆಲ್ ದರ ಲೀಟರ್ ಗೆ 78 ಪೈಸೆ ಹೆಚ್ಚಾಗಿದ್ದು 94.01ಕ್ಕೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿಂದು ಪೆಟ್ರೋಲ್ ಬೆಲೆ ಲೀಟರ್ ಗೆ 104.61 ಮುಟ್ಟಿದೆ. ಲೀಟರ್ ಡೀಸೆಲ್ ಬೆಲೆ 95.87 ತಲುಪಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಗೆ 84 ಪೈಸೆ ಮ್ತು ಡೀಸೆಲ್ ಗೆ 85 ಪೈಸೆ ಹೆಚ್ಚಿಸಲಾಗಿದ್ದು, ಪೆಟ್ರೋಲ್ 119.67, ಡೀಸೆಲ್ 103.92ಕ್ಕೆ ಮಾರಾಟವಾಗುತ್ತಿದೆ.

ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ತಲಾ 77 ಪೈಸೆಯಷ್ಟು ಹೆಚ್ಚಿಸಲಾಗಿದೆ. ಅಲ್ಲಿ ಲೀಟರ್ ಪೆಟ್ರೋಲ್ ದರ 110.11 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 100.19 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 91 ಪೈಸೆ, ಡೀಸೆಲ್ ಬೆಲೆ 87 ಪೈಸೆ ಏರಿಕೆಯಾಗಿದೆ. ಅಲ್ಲಿ ಪೆಟ್ರೋಲ್ 118.59, ಡೀಸೆಲ್ 104.62ಕ್ಕೆ ಮಾರಾಟವಾಗುತ್ತಿದೆ.