ಇಡಿ ದಾಳಿ ಬಳಿಕ ದೇಶದಿಂದ ಕಾಲ್ಕಿತ್ತ ವಿವೋ ಕಂಪನಿ ನಿರ್ದೇಶಕರು.

70
firstsuddi

ನವದೆಹಲಿ: ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಚೀನಾ ಮೂಲದ ವಿವೋ ಮೊಬೈಲ್ ಕಂಪನಿಯ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಸಂಸ್ಥೆಯ ನಿರ್ದೇಶಕರಾದ ಝೆಂಗ್ ಶೆನ್ ಔ ಮತ್ತು ಜಾಂಗ್ ಜೀ ಭಾರತದಿಂದ ಕಾಲ್ಕಿತ್ತಿದ್ದಾರೆ ಎಂದು ವರದಿಯಾಗಿದೆ.

ಇಡಿ ಮಂಗಳವಾರ ಚೀನಾದ ಸಂಸ್ಥೆಯ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ಉಲ್ಲಂಘನೆಯಡಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದಕ್ಷಿಣದ ಕೆಲ ರಾಜ್ಯಗಳ 40 ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ಮಾಡಿತ್ತು. ಇಡಿ ದಾಳಿ ಬಳಿಕ ವಿವೋ ಕಂಪನಿ ತನಿಖೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ಈಗ ಚೀನಾ ಕಂಪನಿಯ ನಿರ್ದೇಶಕರು ದೇಶದಿಂದ ಪಲಾಯನ ಮಾಡಿದ್ದಾರೆ.