ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರು ರಾಜೀನಾಮೆ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ್ದ ಇವರು ನಾನು ಕಚೇರಿಯಲ್ಲಿ ಇಲ್ಲದ ವೇಳೆ ಶಾಸಕರು ರಾಜೀನಾಮೆಯನ್ನು ನೀಡಿದ್ದಾರೆ. ನಾನು ಕಚೇರಿಗೆ ತೆರಳಿ ರಾಜೀನಾಮೆ ಪ್ರತಿಯನ್ನು ಪರಿಶೀಲಿಸಬೇಕು. ಆನಂತರ ಶಾಸಕರ ರಾಜೀನಾಮೆ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಈಗಾ ನಾನು ಇಡುವ ಪ್ರತಿ ಹೆಜ್ಜೆಯೂ ಇತಿಹಾಸವಾಗಲಿದೆ. ನನಗೆ ಯಾವಾ ನಾಯಕರೂ ಇಲ್ಲ. ನನಗೆ ನಾಯಕರು ಸಂವಿಧಾನ ಹಾಗೂ ರಾಜ್ಯದ ಜನರು ಎಂದು ಹೇಳಿದ್ದಾರೆ.










