ಚಿಕ್ಕಮಗಳೂರು : ವಿವಿಧ ಬೇಡಿಕೆ ಆಗ್ರಹಿಸಿ ಕಡೂರು – ಬೀರೂರು ಬಂದ್…

282
firstsuddi

ಚಿಕ್ಕಮಗಳೂರು : ಹೆಬ್ಬೆ ತಿರುವು ಹಾಗೂ ಗೊಂದಿನಾಲೆ ಯೋಜನೆಗೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಕಡೂರು-ಬೀರೂರು ಪಟ್ಟಣವನ್ನು ಬಂದ್ ಮಾಡಲಾಗಿದ್ದು, ಅಂಗಡಿ ಮುಂಗಟ್ಟು, ಆಟೋ, ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಡಿಕೆ ಬೆಳೆಗಾರರ ಸಂಘ ಸೇರಿದಂತೆ ಹತ್ತಾರು ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿದ್ದು, ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಾವಿರಾರು ಹೋರಾಟಗಾರರು ಹಾಗೂ ಸ್ಥಳೀಯರಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬೆಳಿಗ್ಗೆಯಿಂದ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ದಶಕಗಳಿಂದ ಬರಪೀಡಿತ ಪ್ರದೇಶವಾದ ಕಡೂರು ತಾಲ್ಲೂಕಿನ ಹೆಬ್ಬೆ ತಿರುವು ಹಾಗೂ ಗೊಂದಿ ನಾಲೆ ನೀರಾವರಿ ಯೋಜನೆಗೆ ಹೋರಾಟ ಮಾಡಲಾಗಿತ್ತು. ಮಾಜಿ ಶಾಸಕ ವೈ ಎಸ್.ವಿ. ದತ್ತ ಅವರ ನೇತೃತ್ವದಲ್ಲಿ ಕಳೆದ ವರ್ಷ ಪಾದಯಾತ್ರೆ ಸಹ ಮಾಡಲಾಗಿತ್ತು.