ಉಕ್ರೇನ್‍ನಲ್ಲಿ ಸಿಲುಕಿರುವ 5 ಸಾವಿರ ವಿದ್ಯಾರ್ಥಿಗಳ ಪ್ರಯಾಣ ವೆಚ್ಚ ತಮಿಳುನಾಡು ಸರ್ಕಾರ ಭರಿಸಲಿದೆ : ಎಂ.ಕೆ.ಸ್ಟಾಲಿನ್.

59
firstsuddi

ಚೆನ್ನೈ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದೆ. ಇದರಿಂದಾಗಿ ಅನೇಕ ಭಾರತೀಯರು ಕೂಡ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿರುವ ತಮಿಳುನಾಡಿನ ಸುಮಾರು 5,000 ವಿದ್ಯಾರ್ಥಿಗಳ ವಾಪಸ್ ಕರೆತರುವ ವೆಚ್ಚವನ್ನು ತಮಿಳುನಾಡು ಸರ್ಕಾರ ಭರಿಸಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘೋಷಿಸಿದ್ದಾರೆ.

ತಮಿಳುನಾಡಿನ ಸುಮಾರು 5,000 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ವೃತ್ತಿಪರ ಕೋರ್ಸ್ ಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ 916 ವಿದ್ಯಾರ್ಥಿಗಳು ಇಂದು ಬೆಳಗ್ಗೆಯ ವೇಳೆಗೆ ತಮಿಳುನಾಡು ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದಾರೆ. ಉಕ್ರೇನ್ ನಲ್ಲಿ ಸಿಕ್ಕಿಬಿದ್ದವರ ಕುಟುಂಬದ ಸದಸ್ಯರು ಮತ್ತು ಪೋಷಕರಿಂದ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಕರೆಗಳು ಬರುತ್ತಿದೆ. ತಮಿಳುನಾಡು ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಿಸಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಒಂದೇ ಭಾರತ್ ಮಿಷನ್ ನಂತೆ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆದು ತನ್ನಿ ಎಂದು ವಿದೇಶಾಂಗ ಸಚಿವ ಎಸ್.ಜಯಶಂಕರ್ ಅವರಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ.