ಕೊಟ್ಟಿಗೆಹಾರ:ಉಜಿರೆ ಸಮೀಪದ ಬಾಲಕನೊಬ್ಬನನ್ನು ಅಪಹರಿಸಿಸಿರುವ ಬಗ್ಗೆ ಪೋಲಿಸರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಕೊಟ್ಟಿಗೆಹಾರದಲ್ಲಿ ಬಣಕಲ್ ಪೋಲಿಸರು ವಾಹನಗಳ ತಪಾಸಣೆ ನಡೆಸಿದರು.
ಸಂಜೆ 6-30 ರ ಸುಮಾರಿಗೆ ಉಜಿರೆ ಸಮೀಪ ಉದ್ಯಮಿಯೊಬ್ಬನ ಪುತ್ರನ ಅಪಹರಣವಾಗಿದೆ ಎನ್ನುವ ಮಾಹಿತಿ ಪೋಲಿಸರಿಗೆ ತಲುಪಿದ್ದು ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಅಪಹರಿಸಲಾಗಿದ್ದು ಕಾರು ಚಾರ್ಮಾಡಿ ಮಾರ್ಗವಾಗಿ ಕೊಟ್ಟಿಗೆಹಾರ ಕಡೆಗೆ ಸಾಗಿದೆ ಎಂಬ ಸ್ಥಳಿಯರ ಮಾಹಿತಿ ಹಿನ್ನಲೆಯಲ್ಲಿ ಬಣಕಲ್ ಪೋಲಿಸರು ಕೊಟ್ಟಿಗೆಹಾರದಲ್ಲಿ ಚಾರ್ಮಾಡಿ ಘಾಟ್ ಕಡೆಯಿಮದ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಿದರು. ಆದರೆ ಗುರುವಾರ ರಾತ್ರಿ 8-30 ರವರೆಗೆ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಅಪಹರಣದ ಕಾರಣ ತಿಳಿದು ಬಂದಿಲ್ಲ.










