ಉನ್ನತ ವ್ಯಾಸಂಗಕ್ಕಾಗಿ ಕೆನಡಾಕ್ಕೆ ಹೋಗುವ ವಿದೇಶಿ ವಿದ್ಯಾರ್ಥಿನಿಯರ ಮಾರಾಟ.

42

ಕೆನಡಾ: ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆನಡಾಕ್ಕೆ ಹೋಗುವ ವಿದೇಶಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ.  ಅಲ್ಲದೆ, ಅವರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಕೆನಡಾದ ನಗರವಾದ ಬ್ರಾಂಪ್ಟನ್ ನಗರದ ಮೇಯರ್ ಆಗಿರುವ ಪ್ಯಾಟ್ರಿಕ್ ಬ್ರೌನ್ ಅವರು ಆರೋಪಿಸಿದ್ದಾರೆ. ಹಲವಾರು ದೇಶಗಳಿಂದ ಕೆನಡಾಕ್ಕೆ ಉನ್ನತ ವ್ಯಾಸಂಗಕ್ಕಾಗಿ ಅನೇಕ ಯುವತಿಯರು ಬರುತ್ತಾರೆ. ತಮ್ಮ ಭವಿಷ್ಯದ ಹಲವಾರು ಕನಸುಗಳನ್ನು ಹೊತ್ತು ಬರಯವ ಸಾವಿರಾರು ವಿಧ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿವೆ, ಇಗಲೂ ನಡೆಯುತ್ತಿವೆ. ಬಹಿರಂಗವಾಗಿಯೇ ಅವರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ” ಎಂದು ಕೆನಡಾದ ಮೇಯರ್ ಬ್ರೌನ್ ಅವರು ತಿಳಿಸಿದ್ದಾರೆ.
ಕೆನಡಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆನಡಾವು ಇಂದು ಮಾನವ ಕಳ್ಳಸಾಗಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತಿಯನ್ನು ಪಡೆದಿದೆ. ನಮ್ಮ ಸಮಾಜಕ್ಕೆ ಇದೊಂದು ಶಾಪವಾಗಿ ಪರಿಣಿಸಿದೆ. ಇ ಹಗರಣವು ಒಂದು ಮಾರಾಣಾಂತಿಕವಾಗಿ ಪರಿಣಮಿಸಿದೆ. ನಾವು ಇಂಥ ಅನಿಷ್ಟದ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಅವರು ಹೇಳಿದರು. ಬ್ರೌನ್ ಅವರ ಈ ಹೇಳಿಕೆಯು ಅಂತಾರಾಷ್ಟ್ರೀಯ ವಲಯದಲ್ಲಿ ಭಾರೀ ಸದ್ದು ಮಾಡಿದೆ. ಮಾನವ ಕಳ್ಳಸಾಗಣೆಯು ಕೆನಡಾದಲ್ಲಿ ವ್ಯಾಪಾರವಾಗಿ ನಡೆಯುತ್ತಿದೆ ಎಂದು ಈಗಾಗಲೇ ಕೆನಡಾದಲ್ಲಿರುವ ಹಲವಾರು ವಿದ್ಯಾರ್ಥಿ ಸಂಘಟನೆಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದವು. ಹಲವಾರು ಆರೋಪಗಳು ಕೇಳಿಬಂದಿದ್ದವು. ಆದರೆ, ಸರ್ಕಾರ ಮಾತ್ರ ಮಗುಮ್ಮಾಗಿತ್ತು.ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಕೆನಡಾದಲ್ಲಿ ಯುವತಿಯರನ್ನು ಮಾತ್ರವಲ್ಲದೆ, ಯುವಕರನ್ನೂ ಸಹ ಕಳ್ಳಸಾಗಣೆ ಮಾಡಲಾಗುತ್ತಿದೆ. ಸುಲಭವಾಗಿ ಪರಿಚಯವಾಗುವಂಥ, ಹೇಳಲು ಕೇಳಲು ಯಾರೂ ಇಲ್ಲದಂಥ ಯುವಕ – ಯುವತಿಯನ್ನೇ ಮೊದಲು ಟಾರ್ಗೆಟ್ ಮಾಡಲಾಗುತ್ತದೆ. ಬ್ರಾಪ್ಟನ್ ನಗರದಲ್ಲಿರುವ ದೊಡ್ಡ ಶ್ರೀಮಂತರು, ಭೂ ಮಾಲೀಕರು, ಪ್ರೇಮಕ್ಕಾಗಿ ಹಾತೊರೆಯುವಂಥವರು, ಇಂಥ ಯುವಕರು, ಯುವತಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಇಂಥ ಸಂದರ್ಭಗಳಲ್ಲಿ ಅವರನ್ನು ಕಳ್ಳಸಾಗಣೆ ಮಾಡುತ್ತದೆ’’ ಎಂದು ಬ್ರೌನ್ ತಿಳಿಸಿದ್ದಾರೆ. ಇದಲ್ಲದೇ ಓದಲು ಬರುವ ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ, ವಿದೇಶಗಳಲ್ಲಿರುವ ಹಲವಾರು ಯುವಕ – ಯುವತಿಯರಿಗೆ ಉತ್ತಮ ಉದ್ಯೋಗದ ಭರವಸೆಯನ್ನೂ ಸಹ ಆನ್ ಲೈನ್ ಮೂಲಕ ನೀಡಿ ಅವರನ್ನು ಆಕರ್ಷಿಸಿ ಅವರನ್ನು ಕೆನಡಾದಲ್ಲಿ ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಣೆಗೋ ಬಳಸಲಾಗುತ್ತದೆ ಕೆನಡಾದ ಮೇಯರ್ ಬ್ರೌನ್ ಅವರು ತಿಳಿಸಿದ್ದಾರೆ.