ಗುವಾಹಟಿ : ಅಸ್ಸಾಂನಲ್ಲಿ ನಡೆಸಲಾಗಿದ್ದ NRC ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಸುಮಾರು 19.06 ಲಕ್ಷ ಮಂದಿಯ ಹೆಸರು ದಾಖಲಾತಿ ಪಟ್ಟಿಯಿಂದ ಹೊರಗುಳಿದಿದೆ. NRC ದಾಖಲಾತಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಲು ಒಟ್ಟು 3.29 ಕೋಟಿ ಜನರು ಅರ್ಜಿ ಸಲ್ಲಿಸಿದ್ದರು. ಜನರು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲನೆ ನಡೆಸಿದ ಬಳಿಕ NRC ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ 3,11,21,004 ಜನರ ಹೆಸರು ಸೇರ್ಪಡೆಯಾಗಿದ್ದರೆ, ಅರ್ಜಿ ಸಲ್ಲಿಸದವರು ಹಾಗೂ ಅನರ್ಹ ಅರ್ಜಿಗಳು ಸೇರಿ ಒಟ್ಟು 19,06,657 ಜನರು ಭಾರತೀಯ ನಾಗರೀಕ ಪಟ್ಟಿಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ.










