ಎಲ್‍ಇಟಿ ಉಗ್ರ ಸಂಘಟನೆಯ ಓರ್ವ ಉಗ್ರನನ್ನು ಬಂಧಿಸಿದ ಭದ್ರತಾ ಪಡೆ…

203
firstsuddi

ಜಮ್ಮು-ಕಾಶ್ಮೀರ : ಲಷ್ಕರ್-ಎ-ತೋಯೆಬಾ(ಎಲ್‍ಇಟಿ) ಉಗ್ರ ಸಂಘಟನೆಯ ಉಗ್ರನನ್ನು ಭದ್ರತಾ ಪಡೆಗಳು ನಿನ್ನೆ ರಾತ್ರಿ ಬಂಧಿಸಿದ್ದಾರೆ. ಜಮ್ಮು ಕಾಶ್ಮೀರದ ಪೊಳಿಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಲಷ್ಕರ್-ಎ-ತೋಯೆಬಾ ಸಂಘಟನೆಯ ನಿಸ್ಸಾರ್ ಅಹ್ಮದ್ ದಾರ್ ಎಂಬ ಉಗ್ರನನ್ನು ಬಂಧಿಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ನಿಸ್ಸಾರ್ ಕುಲ್ಲನ್ ಗಂಡಾರ್‍ಬಾಲ್‍ನಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ತಪ್ಪಿಸಿಕೊಂಡಿದ್ದ ಎನ್ನಲಾಗಿದ್ದು, ಈ ವೇಳೆ ಓರ್ವ ಪಾಕಿಸ್ತಾನದ ಭಯೋತ್ಪದಕ ಹತ್ಯೆಯಾಗಿದ್ದನೆಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.