ಮೂಡಿಗೆರೆ: ಸಮೀಪದ ಬಣಕಲ್‍ನ ಐಸಿಎಸ್‍ಇ ಪಠ್ಯಕ್ರಮದ ನಜರೆತ್ ಶಾಲೆಯು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಲಭಿಸಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಬ್ಲ್ಯಾಂಚ್ ಕೊರೆಯ ತಿಳಿಸಿದ್ದಾರೆ.
ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಒಟ್ಟು 36 ಮಕ್ಕಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಎಲ್ಲರೂ ತೇರ್ಗಡೆಯಾಗಿದ್ದಾರೆ. ಶಾಲೆಯ 36 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದರೆ, 7 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಒಬ್ಬರು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಅವರಲ್ಲಿ ಅತ್ಯುನ್ನತ ದರ್ಜೆ ಪಡೆದ ವಿದ್ಯಾರ್ಥಿಗಳಾದ ಬಿ.ಎಸ್.ಶೈವಲಾನಿ 468 (ಶೇ94) ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ,ಟಿ.ಎಸ್.ಸುಫೈಲಾ464(ಶೇ93)ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಜಿ.ಪಿ.ಚಿರಾಗ್‍ಗುತ್ತಿ ಹಾಗೂ ಕೆ.ಎಂ.ಅನ್ವಿತ್ ಕ್ರಮವಾಗಿ 460(ಶೇ92) ಅಂಕಗಳನ್ನು ಪಡೆದು ತೃತೀಯಾ ಸ್ಥಾನ ಗಳಿಸಿದ್ದಾರೆ.
ಅತ್ಯನ್ನತ ದರ್ಜೆಯಲ್ಲಿ ಆರ್.ಯು.ಧನುಷ್ ಶೇ91, ಎಂ.ಪಿ.ಅನ್ವೇಶ್ ಶೇ91,ಶ್ರೇಷ್ಠಾನವೀನ್ ಶೇ89,ವಶಿಷ್ಟ ಪಿ.ಮಠ ಶೇ89,ಮಾನವಿ ಎನ್.ಗೌಡ ಶೇ88,ಪ್ರಜ್ವಲ್ ಡಿಸೋಜ ಶೇ87,ಡಿ.ವೈ.ಧರ್ಶನ್ ಶೇ87,ಎನ್.ಖುಷಿ ಶೇ86,ಡಿ.ಕೆ.ಶ್ರೀಶಾನ್‍ಗೌಡ ಶೇ85,ಟಿ.ಆರ್.ಆಕಾಂಕ್ಷಾ ಶೇ85,ಕೆ.ಎಸ್.ಸ್ಕಂದಾ ಶೇ84,ಎಂ.ಎಸ್.ರಕ್ಷಿತಾಪಂಡಿತ್ ಶೇ83,ಕೆ.ಆರ್.ಇಕ್ಷುಧನ್ವ ಶೇ83,ಶ್ರೇಯಸ್‍ಶೆಟ್ಟಿ ಶೇ83,ಡಿ.ಅದ್ವಿತಿ ಶೇ83,ಆರ್.ಸಹನಾ ಶೇ82,ಬಿ.ಎಸ್.ಪ್ರಥಮ್ ಶೇ81,ಎಸ್.ವಿ.ಆಯುಕ್ತ ಶೇ79,ಡಿ.ಟಿ.ಮೋಹನ್ ಶೇ79,ಡಿ.ಎಸ್.ಶಿವಾನಿ ಶೇ78,ಆದಿತ್ಯ ಪಾಯ್ಸ್ ಶೇ78,ಅಶ್ವಿನಿ ಪ್ರಸಾದ್ ಶೇ75,ಎನ್.ಎಸ್.ವಿಲಾಸ್ ಶೇ75,ಕೆ.ಎನ್.ಪ್ರಣಾಗ್ ಶೇ75 ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.ಕಳೆದ ಸಾಲಿನಲ್ಲಿಯೂ ಹಾಗೂ ಈ ಬಾರಿಯು ಸತತವಾಗಿ ಶೇ 100 ಫಲಿತಾಂಶ ಶಾಲೆಗೆ ದೊರೆತಿದೆ.










