ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು…

56
firstsuddi

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕೆ.ಎಸ್.ರಾವ್ ರಸ್ತೆಯ ಕರುಣಾ ಲಾಡ್ಜ್ ನಲ್ಲಿ ನಡೆದಿದೆ.

ಮೃತರನ್ನು ಮೈಸೂರು ವಿಜಯನಗರದ ದೇವೇಂದ್ರಪ್ಪ(48), ಪತ್ನಿ ನಿರ್ಮಲಾ(48), 9 ವರ್ಷದ ಅವಳಿ ಮಕ್ಕಳಾದ ಚೈತ್ರಾ(9), ಚೈತನ್ಯ(9) ಎಂದು ಗುರುತಿಸಲಾಗಿದೆ. ಪತ್ನಿ, ಮಕ್ಕಳಿಗೆ ವಿಷ ಕುಡಿಸಿದ ಬಳಿಕ ದೇವೇಂದ್ರಪ್ಪ ನೇಣಿಗೆ ಶರಣಾಗಿದ್ದಾರೆ.

ಮಾರ್ಚ್ 27ರಂದು ರೂಮ್ ಬುಕ್ ಮಾಡಿದ್ದ ಕುಟುಂಬ, ನಿನ್ನೆ ಸಂಜೆ ರೂಮ್ ಚೆಕ್ ಔಟ್ ಮಾಡಬೇಕಾಗಿತ್ತು. ಆದರೆ ಇಂದು ಬೆಳಗ್ಗೆ ಆದರೂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಸಿಬ್ಬಂದಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮೃತದೇಹಗಳ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಬರೆದಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.