ಒಂದೇ ಕುಟುಂಬದ ಮೂವರ ಹತ್ಯೆ…

84
firstsuddi

ರಾಯಚೂರು : ಒಂದೇ ಕುಟುಂಬದ ಮೂವರನ್ನು ಹತ್ಯೆಗೈದಿರುವ ಘಟನೆ ರಾಯಚೂರಿನ ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿ ನಡೆದಿದೆ.

ಸಂತೋಷಿ(45), ವೈಷ್ಣವಿ(25) ಮತ್ತು ಆರತಿ(16) ಕೊಲೆಯಾದವರು. ಕೌಟುಂಬಿಕ ಕಲಹದ ಹಿನ್ನಲೆ ಅಳಿಯನೇ ಮೂವರನ್ನು ಹತ್ಯೆಗೈದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ರಾಯಚೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಎಸಿಪಿ ಹರಿಬಾಬುರಿಂದ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕಳೆದ 6 ತಿಂಗಳ ಹಿಂದೆಯಷ್ಟೇ ವೈಷ್ಣವಿ ಮತ್ತು ಸಾಯಿಗೆ ಮದುವೆ ಆಗಿತ್ತು. ಮದುವೆ ಬಳಿಕ ಆರೋಪಿ ಸಾಯಿ ಹಾಗೂ ವೈಷ್ಣವಿ ಮಧ್ಯೆ ಜಗಳ ಶುರುವಾಗಿತ್ತು. ನಿನ್ನೆ ಅತ್ತೆ ಮನೆಗೆ ಬಂದಿದ್ದ ಸಾಯಿ ಮನೆಯವರ ಜೊತೆ ಜಗಳವಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂಬ ಶಂಕೆ ಮೂಡಿದೆ.