ನದಿಗೆ ಹಾರಿ ತಾಯಿ – ಮಗು ಆತ್ಮಹತ್ಯೆ ; ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ ತಾಯಿ…

110
firstsuddi

ಗದಗ : ತನ್ನ ಮೂವರು ಮಕ್ಕಳೊಂದಿಗೆ ಮಲಪ್ರಭಾ ನದಿಗೆ ಹಾರಿದ್ದ ತಾಯಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ.

ಜಿಲ್ಲೆಯ ರೋಣ ತಾಲ್ಲೂಕಿನ ಹೊಳೆಆಲೂರು ಗ್ರಾಮದ ಬಳಿ ಮಲಪ್ರಭಾ ನದಿಗೆ ಮಕ್ಕಳ ಜತೆ ನದಿಗೆ ಹಾರಿದ್ದ ಮಹಿಳೆ ಉಮಾದೇವಿ ಮುಳ್ಳಿನ ಪೊದೆಯಲ್ಲಿ ಸಿಲುಕಿದ್ದು, ಸಾವಿನ ಅಂಚಿನಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಇನ್ನೂ ನೀರುಪಾಲಾಗಿರುವ ಮಗುವಿಗಾಗಿ ಶೋಧ ಕಾರ್ಯ ಮುಂದಿವರಿದಿದೆ.

ಏನಿದು ಘಟನೆ?
ಉಮಾದೇವಿ (45) ತನ್ನ ತನ್ನ ಮೂವರು ಮಕ್ಕಳೊಂದಿಗೆ ಇಂದು ಮುಂಜಾನೆ ಮಲಪ್ರಭಾ ನದಿಗೆ ಹಾರಲು ಯತ್ನಿಸಿದಾಗ 12 ಹಾಗೂ 14 ವರ್ಷದ ಮಕ್ಕಳಿಬ್ಬರು ತಾಯಿಯಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ಬಳಿಕ 8 ವರ್ಷದ ಮಗಳೊಂದಿಗೆ ಮಹಿಳೆ ನೀರಿಗೆ ಹಾರಿದ್ದಾರೆ.

ಮೂರು ತಿಂಗಳ ಹಿಂದೆ ಈಕೆಯ ಪತಿ ಸಂಗಮೇಶ ಚಲ್ಲಿಕೇರಿ ಕೋವಿಡ್ನಿಂದ ಸಾವನ್ನಪ್ಪಿದ್ದರು. ಪತಿ ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.