ಕಂಠಪೂರ್ತಿ ಮದ್ಯ ಕುಡಿಸಿ ಭಿಕ್ಷುಕಿ ಮೇಲೆ ರೇಪ್ – ಕಾಮುಕ ಅರೆಸ್ಟ್…

85
firstsuddi

ಯಾದಗಿರಿ : ಮದ್ಯ ಕುಡಿಸಿ ಭಿಕ್ಷುಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ಹನುಮಂತ (40) ಬಂಧಿತ ಆರೋಪಿ. ನವೆಂಬರ್ 23ರ ರಾತ್ರಿ ನಗರದ ಹಳೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹನುಮಂತ ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ ತಾನು ಕುಡಿದು ರೇಪ್ ಮಾಡಿದ್ದಾನೆ. ಭಿಕ್ಷುಕಿ ನಿರಾಕರಿಸಿದ್ದರೂ, ಆಕೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಮಾಡಿದ್ದಾನೆ. ಸ್ಥಳೀಯರು ಪ್ರಶ್ನಿಸಿದ್ದಾಗ ಭಿಕ್ಷುಕಿಯನ್ನು ನನ್ನ ಹೆಂಡ್ತಿ ಆಗಬೇಕೆಂದು ನಾಟಕ ಮಾಡಿದ್ದಾನೆ. ಆದರೆ ಅನುಮಾನ ಬಂದ ಸ್ಥಳೀಯರು ಪೊಲೀಸರನ್ನ ಸ್ಥಳಕ್ಕೆ ಕರೆಸಿ ಕಾಮುಕನನ್ನು ಒಪ್ಪಿಸಿದ್ದಾರೆ. ಘಟನೆ ನಡೆದ ಮಾರನೇ ದಿನ ಬೆಳಗ್ಗೆ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಳಿಕ ಕಾಮುಕನನ್ನ ಪೊಲೀಸರು ಬಂಧಿಸಿದ್ದಾರೆ.