ಕಡೂರು : ಸೇತುವೆಗೆ ಡಿಕ್ಕಿ ಹೊಡೆದು ಟ್ಯಾಂಕರ್ ಪಲ್ಟಿ, ಚಾಲಕ ಸಾವು…

235
firstsuddi

ಚಿಕ್ಕಮಗಳೂರು : ಸೇತುವೆಗೆ ಡಿಕ್ಕಿ ಹೊಡೆದು ಟ್ಯಾಂಕರ್ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಡೂರು ತಾಲೂಕು ಬೀರೂರು ಸಮೀಪದ ದೋಗೆಹಳ್ಳಿ ಬಳಿ ನಡೆದಿದೆ. ಲಿಂಗರಾಜು (45) ಮೃತ ದುರ್ಧೈವಿ. ಮೃತ ಲಿಂಗರಾಜು ಅವರು ಹಾಸನ ಮೂಲದವರು ಎಂದು ತಿಳಿದು ಬಂದಿದ್ದು, ದಾವಣಗೆರೆಯಿಂದ ಬೀರೂರಿಗೆ ತೆರಳುವಾಗ ಘಟನೆ ನಡೆದಿದೆ. ಪಟ್ರೋಲ್ ಟ್ಯಾಂಕರ್  ಖಾಲಿ ಇದ್ದಿದರಿಂದ ಬಾರಿ ಅನಾಹುತ ತಪ್ಪಿದ್ದು, ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.