ಮೂಡಿಗೆರೆ : ಹಂಡುಗುಳಿಯ ಮನ್ಸೂರ್ ಬಿನ್ ಅಬ್ದುಲ್ ರಝಾಕ್ ಎಂಬಾತ ಪಕ್ಕದ ಮನೆಯ ಹೆಚ್.ಎ.ರಝಾಕ್ ಹಂಡುಗುಳಿ ಇವರ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕಿವಿ ಮತ್ತು ಕೆನ್ನೆ ಭಾಗಕ್ಕೆ ತೀವ್ರ ಗಾಯವಾಗಿದ್ದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆದಿರುತ್ತಾರೆ.
ಮಂಗಳವಾರ ರಾತ್ರಿ ಸಮಯದಲ್ಲಿ ಆರೋಪಿಯು ಪಟಾಕಿ ಹಚ್ಚುತ್ತಿದ್ದು ಸುತ್ತಮುತ್ತಲ ಅಶಾಂತಿಗೆ ಕಾರಣವಾಗಿದ್ದು ವಯಸ್ಕರಿದ್ದು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಕ್ಕೆ ಕೇಳಲು ನೀನ್ಯಾರು ಎಂದು ಕತ್ತಿಯನ್ನು ತಂದು ಕೊಲೆಗೆ ಯತ್ನಿಸಿ ಕುತ್ತಿಗೆಗೆ ಬೀಸಿದ್ದು ಗಾಯಾಳು ತಪ್ಪಿಸಿಕೊಂಡಿದ್ದು ಕಿವಿ ಮತ್ತು ಕೆನ್ನೆಗೆ ಪೆಟ್ಟು ಬಿದ್ದಿದ್ದು ತೀವ್ರ ರಕ್ತಸ್ತ್ರಾವವಾಗಿ ಹತ್ತಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಕಲಂ ಐಪಿಸಿ ಸೆಕ್ಷನ್ 324, 504, 506 ಪ್ರಕರಣ ದಾಖಲಿಸಲಾಗಿದೆ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದ್ದು .
ಸೆಕ್ಷನ್ 307 ದಾಖಲಿಸಲು ಕುಟುಂಬಸ್ತರ ಆಗ್ರಹ:
ಆರೋಪಿ ಮನ್ಸೂರ್ ಎಂಬಾತನ ಮೇಲೆ ಹಲವು ಪ್ರಕರಣಗಳಿದ್ದು, ಕಳೆದ ವರ್ಷ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಅಲ್ಲದೇ ಪತ್ರಕರ್ತನ ಸೋಗಿನಲ್ಲಿ ಅಧಿಕಾರಿಗಳನ್ನು ಬೆದರಿಸುತ್ತಿದ್ದು. ಅಲ್ಲದೇ, ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆಗೆ ಪ್ರಯತ್ನಿಸಲಾಗಿತ್ತು ಸಮಾಜಕ್ಕೆ ಮಾರಕವಾಗಿರುವ ಈ ವ್ಯಕ್ತಿ ನನ್ನಲ್ಲಿ ರೈಫಲ್ ಇದ್ದು ಶೂಟ್ ಮಾಡುತ್ತೇನೆಂದು ಬೆದರಿಸುತ್ತಿದ್ದು ಈ ಬಗ್ಗೆಯೂ ತನಿಖೆ ನಡೆಸಬೇಕು ಮತ್ತು ಪರವಾನಗೆ ಇದ್ದಲ್ಲಿ ರದ್ದುಗೊಳಿಸಬೇಕು ಹಾಗೂ ಅನೇಕ ಪ್ರಕರಣದಲ್ಲಿ ಆರೋಪಿಯಾಗಿರುವ ಈತ ಗ್ರಾಮಕ್ಕೆ ಮಾರಕವಾಗಿದ್ದು ಕೂಡಲೇ ಗಡಿಪಾರುಗೊಳಿಸಬೇಕು ಎಂದು ಉಸ್ಮಾನ್, ಯೂಸೂಫ್, ಮನ್ಸೂರ್, ಅಬುಬಕರ್, ಸೈಯ್ಯದ್ ಆಲಿ ಮತ್ತಿತರರು ಆಗ್ರಹಿಸಿದ್ದಾರೆ.










