ಕೇರಳ : ಕಥಕ್ ಡ್ಯಾನ್ಸರ್ ಎಂಬ ಹೆಗ್ಗಳಿಕೆ ಪಾತ್ರರಾದ ಕೇರಳದ ಚೆಮ್ಮಂಚೇರಿ ಕುನ್ಹಿರಾಮನ್ ನಾಯರ್ ಅವರು ಇಂದು ಬೆಳಗ್ಗೆ ಕೇರಳದ ಕೋಝಿಕ್ಕೋಡು ಜಿಲ್ಲೆಯಲ್ಲಿರುವ ಕೊಯಿಲಾಂಡಿ ಸಮೀಪ ಚೆಲಿಯಾದಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 105 ವರ್ಷ ವಯಸ್ಸಾಗಿತ್ತು.
1945 ರಲ್ಲಿ ಭರತನಾಟ್ಯಂನಿಂದ ಅವರ ಪಯಣ ಆರಂಭವಾಯಿತು. ಮೊದಲು ಸ್ತ್ರೀಪಾತ್ರಗಳಲ್ಲಿ ಮಿಂಚುತ್ತಿದ್ದ ಚೆಮ್ಮಂಚೇರಿ ನಾಯರ್ ಅವರು ತಮ್ಮ ಗುರುವಿನ ಸಲಹೆಯಂತೆ ಕೃಷ್ಣಾವತಾರದಲ್ಲಿ ಕಥಕ್ ನೃತ್ಯ ಮಾಡಲು ಆರಂಭಿಸಿದರು. ಕುನ್ಹಿರಾಮನ್ ಅವರು ತಮ್ಮ ಹುಟ್ಟೂರಾದ ಚೆಲಿಯಾದಲ್ಲಿ ಕಥಕ್ಕಳಿ ವಿದ್ಯಾಲಯವನ್ನು ಆರಂಭಿಸಿದರು. 2017ರಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಗೌರವ ಸೇರಿದಂತೆ ಹತ್ತು ಹಲವು ಸನ್ಮಾನ, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.










