ಕರಾಚಿ-ರಾವಲ್ಪಿಂಡಿ ತೇಜ್‍ಗಾಮ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಆಕಸ್ಮಿಕ ಬೆಂಕಿ-65ಮಂದಿ ಪ್ರಯಾಣಿಕರ ದುರ್ಮರಣ…

296
firstsuddi

ಪಾಕಿಸ್ತಾನ : ಕರಾಚಿಯಿಂದ ಲಾಹೋರ್‍ಗೆ ಸಂಚರಿಸುತ್ತಿದ್ದ ಕರಾಚಿ-ರಾವಲ್ಪಿಂಡಿ ತೇಜ್‍ಗಾಮ್ ಎಕ್ಸ್​ಪ್ರೆಸ್ ರೈಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು 65ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಪಾಕಿಸ್ತಾನದ ಲಿಯಾಖತ್‍ಪರದಲ್ಲಿ ನಡೆದಿದ್ದು, ಕರಾಚಿ- ರಾವಲ್ಪಿಂಡಿ ತೇಜ್​​ಗಾಂ ಎಕ್ಸ್​​ಪ್ರೆಸ್​​ ರೈಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪರಿಣಾಮ 65ಮಂದಿ ಪ್ರಯಾಣಿಕರು ಬೋಗಿಯಲ್ಲಿ ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.