ಕಳಸ- ದೀಪಾವಳಿಯ ಗೋಪೂಜೆ ಮಾಡುವ ಸಂದರ್ಭದಲ್ಲಿಯೇ ದನವೊಂದು ಕರು ಹಾಕಿದ ಸ್ವಾರಸ್ಯಕರ ಘಟನೆ. ಸಮೀಪದ ಮರಸಣಿಗೆಯಲ್ಲಿ ನಡೆದಿದೆ. ಮರಸಣಿಗೆಯ ವಿಶ್ವನಾಥ ಎಂಬುವವರ ಮನೆಯಲ್ಲಿದ್ದ ಜಾನುವಾರುಗಳಿಗೆ ಶುಕ್ರವಾರದ ಬೆಳಿಗ್ಗೆಯೇ ಗೋಪೂಜೆಗೆ ಹಟ್ಟಿ,ಗೋವುಗಳನ್ನು ತೊಳೆದು ಪೂಜೆಗೆ ಸಿದ್ಧತೆಗಳನ್ನು ಮಾಡಲಾಗುತ್ತಿತ್ತು.ತುಂಬು ಗರ್ಭಿಣಿಯಾಗಿದ್ದ ಲಕ್ಷ್ಮೀ ಎಂಬ ನಾಮಾಂಕಿತ ದನವನ್ನು ಕೂಡ ತೊಳೆದು ಹೂವಿನ ಹಾರ ಹಾಕಿ ಸಿಂಗಾರ ಮಾಡಲಾಗಿತ್ತು.
ಅಷ್ಟೋತ್ತಿಗಾಗಲೇ ತುಂಬು ಗರ್ಭಿಣಿಯಾಗಿದ್ದ ಲಕ್ಷ್ಮೀಗೆ ಹೆರಿಗೆ ನೋವು ಕಾಣಿಸಿಕೊಂಡು ಕರುಹಾಕಲು ತೊಳಲಾಟ ನಡೆಸುತ್ತಿತ್ತು.ಮನೆಯವರು ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಿ ಕರುಹಾಕಲು ತಯಾರಾಗಿದ್ದ ಲಕ್ಷ್ಮೀಯ ಆರೈಕೆಯಲ್ಲಿ ಮಗ್ನರಾದರು.ನೋಡು ನೋಡುತ್ತಿದ್ದಂತೆ ಲಕ್ಷ್ಮಿಯು ಮುದ್ದಾದ ಹೆಣ್ಣುಕರುವೊಂದಕ್ಕೆ ಜನ್ಮ ನೀಡಿತು.ಮನೆಗೆ ಬಂದ ಹೊಸ ಅಥಿತಿಯನ್ನು ಕಂಡು ಕುಟುಂಬಸ್ಥರಿಗೆ ಹಬ್ಬದ ಸಂತಸಕ್ಕೆ ಹಿಮ್ಮಡಿ ನೀಡಿತು.ತಾಯಿ ಮತ್ತು ಮಗುಗೆ ಕೂಡ ಸ್ನಾನ ಮಾಡಿಸಿ ಹೂ ಹಾರ ಹಾಕಿ ಸಿಂಗಾರ ಮಾಡಿ ಒಟ್ಟಿಗೆ ಆರತಿ ಬೆಳಗಿ ಗೋಪೂಜೆಯನ್ನು ಕುಟುಂಬಸ್ಥರು ಸೇರಿ ನಡೆಸಿದರು.










