ಕಳಸ :ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಬ್ಯಗಳು ಎಲ್ಲ ರೈತರಿಗೂ ಸಿಗುತ್ತಿಲ್ಲ: ಕೆ.ಆರ್.ಪ್ರಭಾಕರ್

209
firstsuddi

ಕಳಸ : ಕಳಸಕ್ಕೆ ಕೃಷಿ ಯಂತ್ರದಾರೆ ತಂದರೂ ಕೂಡ ಅದನ್ನು ಏಜೆನ್ಸಿ ಗಳು ರೈತರಿಗೆ ಅದರ ಉಪಯೋಗ ನೀಡಲು ಸಾದ್ಯವಾಗಲಿಲ್ಲ. ಇಲ್ಲಿ ತಂದಿರುವ ಯಂತ್ರೋಪಕರಣಗಳಿಗೆ ಊದು ಬತ್ತಿ ಹಚ್ಚಿ ಪೂಜೆ ಮಾಡಿ ಎಂದು ಏಜೆನ್ಸಿಯ ವ್ಯವಸ್ಥಾಪಕರ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್ ಕಿಡಿ ಕಾರಿದರು.
ಕಳಸದಲ್ಲಿ ಇಂದು ನಡೆದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ನಡೆದ ರೈತ ಸಂಪರ್ಕ ಕೇಂದ್ರದ ಮೂಲಕ ಕೃಷಿ ವಿಸ್ತರಣೆ ಬಲವರ್ಧನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಳಸ ಹೋಬಳಿಗೆ ಕಳೆದ ಒಂದೂವರೆ ವರ್ಷದ ಹಿಂದೆನೇ ಕೃಷಿ ಯಂತ್ರದಾರೆಯನ್ನು ತರಲಾಗಿತ್ತು. ಆದರೆ ಅದರ ನಿರ್ವಹಣೆ ಹೊತ್ತ ಏಜೆನ್ಸಿ ಜನವಸತಿ ಇಲ್ಲದ ಪ್ರದೇಶದಲ್ಲಿ ಇಲ್ಲಿಯ ಕೃಷಿಕರಿಗೆ ಯೋಗ್ಯವಿಲ್ಲ ಯಂತ್ರಗಳನ್ನು ತಂದು ಬೀಗ ಹಾಕಿಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಗಮನಸೆಳೆದು ರೈತರಿಗೆ ಇದರ ಉಪಯೋಗವಾಗುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಏಜೆಸ್ಸಿ ಅದನ್ನು ಮಾಡಲಿಲ್ಲ 15 ದಿನದ ಒಳಗಾಗಿ ರೈತರಿಗೆ ಅನುಕೂಲವಾಗುವ ಅಡಕೆ ಸುಲಿಯುವ ಯಂತ್ರ, ವೀಲ್ ಕಟರ್, ಕಾಳು ಮೆಣಸು ಬಿಡಿಸುವ ಯಂತ್ರ, ಒಕ್ಕಲಾಟದ ಮಿಷನ್ ಮುಂತಾದ ಯಂತ್ರಗಳೊಂದಿಗೆ ಕಳಸದ ಅರಮನೆಮಕ್ಕಿ ಮೈದಾನದಲ್ಲಿ ಕೃಷಿಕರಿಗೆ ಉಪಯೋಗವಾಗುವ ರೀತಿಯಲ್ಲಿ ತೆರೆದಿಡಬೇಕು ಎಂದು ಏಜೆಸ್ಸಿಯ ವ್ಯವಸ್ಥಾಪಕರಿಗೆ ತಾಕೀತು ಮಾಡಿದರು.
ಇಲಾಖೆಯಲ್ಲಿ ಸಿಗುವ ಪ್ರತಿಯೊಂದು ಸವಲತ್ತುಗಳು ಕೂಡ ಕೃಷಿಕರಿಗೆ ತಲುಪಿದರೆ ಮಾತ್ರ ರೈತರು ಕೃಷಿ ಇಲಾಖೆಯ ಮೇಲೆ ನಂಬಿಕೆ ಉಳಿಸಿಕೊಳ್ಳುತ್ತಾರೆ. ಕಳೆದ ಬಾರಿ ಮಳೆಗೆ ಉಂಟಾದ ಬೆಳೆ ಹಾನಿಗೆ ಇನ್ನೂ ಕೂಡ ಸಮರ್ಪಕವಾಗಿ ಪರಿಹಾರ ಸಿಗಲಿಲ್ಲ ಎಂದು ಹೇಳಿದರು.
ಕೃಷಿ ಇಲಾಖೆಯಿಂದ ಸಿಗುವ ಟಾರ್ಪಲ್‍ಗಳು ಹೆಚ್ಚಿನ ಕೃಷಿಕರಿಗೆ ಸಿಗುವಂತೆ ಮಡಬೇಕು. ಅಡಕೆಗೆ ರೋಗಗಳು ಉಂಟಾಗಿದ್ದು, ಇದಕ್ಕೆ ಸೂಕ್ತ ಪರಿಣತ ವಿಜ್ಞಾನಿಗಳನ್ನು ಕರೆಸಿ ಪರೀಕ್ಷೆ ನಡೆಸಬೇಕು. ಅರಣ್ಯ ಹಕ್ಕು ಪತ್ರ ಇದ್ದವರಿಗೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಬ್ಯಗಳು ಸಿಗುತ್ತಿಲ್ಲ. ಆದ್ದರಿಂದ ಸಿಗುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೃಷಿ ಕರು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಆಶಾ, ತೋಟಗಾರಿಕಾ ಇಲಾಖಾ ಅಧಿಕಾರಿ ಸಿ.ಚಂದ್ರಪ್ಪ, ಕೃಷಿ ಅಧಿಕಾರಿಗಳಾದ ಕು|ರೇಖಾ, ಪಾಂಡುರಂಗ, ಕಳಸ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್, ಪ್ರಗತಿಪರ ಕೃಷಿಕ ಕಿರಣ್ ಶೆಟ್ಟಿ, ಜೇನು ಕೃಷಿಕ ಚಂದ್ರಶೇಖರ ಇತರರು ಇದ್ದರು.