ಮೂಡಿಗೆರೆ : ಕೋವಿಡ್-19 ಸೋಂಕು ಇರುವ ಭೀತಿ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಬರುವವರಿಗೆ ಕಡ್ಡಾಯವಾಗಿ ಹೋಂ-ಕ್ವಾರಂಟೈನ್ ಮಾಡುವುದಾಗಿ ಹೊರನಾಡು, ಮರಸಣಿಗೆ ಹಾಗೂ ಇಡಕಿಣಿ ಗ್ರಾಮ ಪಂಚಾಯತಿಗಳು ನಿರ್ಣಯ ಕೈಗೊಂಡಿವೆ.
ಹೊರನಾಡು, ಮರಸಣಿಗೆ ಹಾಗೂ ಇಡಕಣಿ ಗ್ರಾಮ ಪಂಚಾಯತಿಗಳಲ್ಲಿ ನಡೆಸಲಾದ ಸಭೆಯಲ್ಲಿ ಕೆಂಪು ಹಾಗೂ ಹಳದಿ ವಲಯಗಳಿಂದ ಬರುವ ಯಾವುದೇ ವ್ಯಕ್ತಿಗಳನ್ನು ಊರಿನ ಸುರಕ್ಷತೆಯ ದೃಷಿಯಿಂದ ಕಡ್ಡಾಯವಾಗಿ ಹೋಂ-ಕ್ವಾರಂಟೈನ್ ಮಾಡವುದು ಸೂಕ್ತ. ಇದರಿಂದಾಗಿ ಹಲವರಿಗೆ ತೊಂದರೆಯ ಜೊತೆಗೆ ಬೇಸರ ಉಂಟಾದರೂ ಸಹಜ. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಹೊರ ಜಿಲ್ಲೆಗಳಿಂದ ತಮ್ಮ ತಮ್ಮ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ವ್ಯಾಪಕವಾಗಿ ಜನರು ಬರುತ್ತಿದ್ದು ಇದು ಸ್ಥಳೀಯರಲ್ಲಿ ಅತಂಕ ಮನೆಮಾಡಲು ಕಾರಣವಾಗಿದೆ. ಅದರಲ್ಲೂ ಹಿರೇಬೈಲು ಗ್ರಾಮಕ್ಕೆ ಮಂಗಳೂರು ಕಡೆಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಓಡಾಟ ನಡೆಸುತ್ತಿದ್ದು ಹೆಚ್ಚಿನ ಜಾಗೃತೆ ವಹಿಸಬೇಕು ಎನ್ನುವು ಇಡಕಣಿ ಗ್ರಾಮ ಪಂಚಾಯತಿಯ ಸಭೆಯಲ್ಲಿ ಎಲ್ಲರ ಒಕ್ಕೋರಲ ಅಭಿಮತವಾಗಿತ್ತು.
ಹೊರನಾಡು ಗ್ರಾಮ ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸನ್ಮತಿ, ಉಪಾಧ್ಯಕ್ಷೆ ವಿನೋದಾ, ಪಿಡಿಓ ಅರುಣ್ ಕುಮಾರ್, ವೈದ್ಯಾಧಿಕಾರಿ ಸುನೈನಾ, ಪೋಲಿಸ್ ಸಿಬ್ಬಂದಿ ಮೋಹನ್, ರಾಜಣ್ಣ. ಮರಸಣಿಗೆ ಗ್ರಾಮ ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಇಂದಿರಾ, ಸದಸ್ಯ ವಿಶ್ವನಾಥ್, ಪಿಡಿಓ ಸುಧೀರ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂಧಿಗಳು. ಇಡಕಣಿ ಗ್ರಾಮ ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಚಿತ್ರಾ, ಪಿಡಿಓ ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಸುಧಾಕರ್ ಹಾಗೂ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
Home ಸ್ಥಳಿಯ ಸುದ್ದಿ ಕಳಸ : ಕೊರೊನಾ ಭೀತಿ-ಹೊರ ಜಿಲ್ಲೆಗಳಿಂದ ಬರುವವರಿಗೆ ಹೋಂ-ಕ್ವಾರಂಟೈನ್ ಕಡ್ಡಾಯ : ಗ್ರಾ.ಪಂ.ಗಳ ನಿರ್ಣಯ…










