ಕಳಸ: ತಾಲ್ಲೂಕಿನ ಕಾರಕ್ಕಿಯಲ್ಲಿ ಎರಡು ತಲೆ ಹಾವು ಹಾಗೂ ಅದರ ಮೊಟ್ಟೆಗಳು ಪತ್ತೆ…

735
firstsuddi

ಕಳಸ: ತಾಲ್ಲೂಕಿನ ಕಾರಕ್ಕಿ ಎಂಬಲ್ಲಿ ಎರಡು ತಲೆ ಹಾವು ಹಾಗೂ ಅದರ ಮೊಟ್ಟೆಗಳು ಪತ್ತೆಯಾಗಿದೆ. ಕೆ.ಸಿ.ಮಹೇಶ್ ಎಂಬುವವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಮೊಟ್ಟೆಗಳು ಪತ್ತೆಯಾಗಿದ್ದು, ಸುಮಾರು 100ಕ್ಕೂ ಅಧಿಕ ಮೊಟ್ಟೆಗಳಿವೆ. ಮೊಟ್ಟೆಯ ಒಳಗೆ ಹಾವಿನ ಮರಿಗಳು ಓಡಾಡುತ್ತಿರುವುದು ಕಾಣುತ್ತಿದ್ದು, ಒಂದೆರಡು ದಿನಗಳಲ್ಲಿ ಮರಿಗಳು ಹೊರಬರಬಹುದು. ಈ ಕುರಿತು ಜಾಗ್ರತೆ ವಹಿಸಿದ ಮಹೇಶ್ ಅವರು ಮೊಟ್ಟೆ ಮತ್ತು ಹಾವನ್ನು ಮೊಟ್ಟೆ ಇಟ್ಟ ಸ್ಥಳದಲ್ಲಿಯೇ ರಕ್ಷಿಸಿದ್ದಾರೆ.