ಕಳಸ ತಾಲ್ಲೂಕು ಕೇಂದ್ರ ಕಾರ್ಯಾರಂಭಕ್ಕೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಪೋಸ್ಟ್ ಕಾರ್ಡ್ ಚಳುವಳಿ ಆರಂಭ…

169
firstsuddi

ಮೂಡಿಗೆರೆ : ಕಳಸ ತಾಲ್ಲೂಕು ಕೇಂದ್ರದ ಕಾರ್ಯಾರಂಭಕ್ಕೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಶನಿವಾರದಿಂದ ಪೋಸ್ಟ್ ಕಾರ್ಡ್ ಚಳುವಳಿ ಆರಂಭ ಮಾಡಿದೆ. ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್, ಮುಖಂಡರುಗಳಾದ ಶ್ರೇಣಿಕ್, ಎನ್.ಎಂ.ಹರ್ಷ, ವಿಶ್ವನಾಥ್, ಅನಿಲ್ ಭಂಡಾರಿ, ಗಣೇಶ್ ಭಟ್, ದೇಜಪ್ಪ, ಇರ್ಷಾದ್ ಮತ್ತಿತರರು ಪ್ರತ್ಯೇಕವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಂಚೆ ಪೆಟ್ಟಿಗೆಗೆ ಹಾಕುವ ಮೂಲಕ ಚಾಲನೆ ನೀಡಿದರು.
ಕಳಸ ತಾಲ್ಲೂಕು ಘೋಷಣೆಯಾಗಿ ಒಂದೂವರೆ ವರ್ಷ ಕಳೆದರೂ ಸಹ ತಾಲ್ಲೂಕು ಕೇಂದ್ರವನ್ನಾಗಿ ಕಾರ್ಯರಂಭ ಮಾಡಲು ಅಧಿಸೂಚನೆ ಹೊರಬಿದ್ದಿಲ್ಲ. ಈ ವಿಚಾರದಲ್ಲಿ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸ್ಥಳೀಯರೇ ಆದ ಜಿಲ್ಲಾ ಉಸ್ತುವಾರಿ ಸಚಿವರು ಉದ್ದೇಶಪೂರ್ವಕಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆಗಸ್ಟ್ 15ರ ವರೆಗೂ ಉದ್ದೇಶಿತ ಕಳಸ ತಾಲ್ಲೂಕು ವ್ಯಾಪ್ತಿಯ ನಿವಾಸಿಗಳು ಸತತವಾಗಿ ಪತ್ರವನ್ನು ಬರೆದು ಮುಖ್ಯಮಂತ್ರಿಗಳಲ್ಲಿ ತಾಲ್ಲೂಕು ಕೇಂದ್ರದ ಕಾರ್ಯಾರಂಭದ ಬಗ್ಗೆ ಒತ್ತಾಯಿಸಬೇಕು ಎಂದು ಶ್ರೀನಿವಾಸ್ ಹೆಬ್ಬಾರ್ ಸಾರ್ವಜಿಕರಲ್ಲಿ ಮನವಿ ಮಾಡಿದರು.