ಚಿಕ್ಕಮಗಳೂರು : ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಕೆ.ಎಲ್. ಚಂದ್ರಶೇಖರ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಪಿಹೆಚ್‍ಡಿ ಪದವಿ…

251
firstsuddi

ಚಿಕ್ಕಮಗಳೂರು : ನಗರದ ಐಡಿಎಸ್‍ಜಿ ಮತ್ತು ಎಸ್‍ಟಿಜೆ ಕಾಲೇಜಿನ ಕನ್ನಡ ಉಪನ್ಯಾಸಕ ಕೆ.ಎಲ್.ಚಂದ್ರಶೇಖರ್ ಅವರು ಮಂಡಿಸಿದ ಜನಪದ ನಂಬಿಕೆಗಳು-ಸಾಂಸ್ಕೃತಿಕ ಅಧ್ಯಯನ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿ ನೀಡಿದೆ.
ಕಡೂರು ತಾಲ್ಲೂಕಿನ ಹಳೇಹಟ್ಟಿ ಗ್ರಾಮದ ರೈತ ಕೆ.ಪಿ.ಲೋಕೇಶಪ್ಪ ಹಾಗೂ ಶಕುಂತಲಾ ದಂಪತಿಯ ಪುತ್ರ ಚಂದ್ರಶೇಖರ್ ಅವರು ಕನ್ನಡ ವಿಭಾಗದ ನಿವೃತ್ತ ಸಹಪ್ರಾಧ್ಯಾಪಕ ಡಾ|| ಬಿ.ಬಿ.ಸುವರ್ಣ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಯಿತು.