ಕಳಸ :ಪೊಲೀಸರಿಂದ ಕೂಲಿ ಕಾರ್ಮಿಕರಿಗೆ ಮಾಸ್ಕ್ ವಿತರಣೆ…

244

ಕಳಸ:ಕೊರೋನ ಸೋಂಕು ವೈರಸ್ ಹರಡುವಿಕೆಯಿಂದ ಊರಿಗೆ ತೆರಳಿದ್ದ ರಾಜ್ಯ ಮತ್ತು ಹೊರರಾಜ್ಯದ ಕೂಲಿ ಕಾರ್ಮಿಕರು ಈಗ ಮತ್ತೆ ಎಸ್ಟೇಟುಗಳಿಗೆ ಮರಳಿ ಬರುತ್ತಿದ್ದು ಇವರಿಗೆ ಕಳಸ ಪೊಲೀಸರು ಮಾಸ್ಕ್ ವಿತರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಹೇಳಿದರು..
ಭಾನುವಾರ ಸಾಕಷ್ಟು ಪ್ರಮಾಣದಲ್ಲಿ ಕೂಲಿ ಕಾರ್ಮಿಕರು ಕಳಸಕ್ಕೆ ಬಂದಿಳಿದಿದ್ದಾರೆ.ಆದರೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಮಾಸ್ಕ್ ಹಾಗೂ ಯಾವುದೇ ಸಾಮಾಜಿಕ ಅಂತರಗಳು ಇಲ್ಲದೆ ಗುಂಪು ಗುಂಪುಗಳಾಗಿ ಇರುವುದು ಕಂಡು ಬಂದಿತ್ತು.ಕೂಡಲೇ ಕಳಸ ಪಿಎಸ್‍ಐ ಮಂಜಯ್ಯ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮಾಹಿತಿ ನೀಡಿದರು.ಅಲ್ಲದೆ ಎಲ್ಲರಿಗೂ ಮಾಸ್ಕ್ ಗಳನ್ನು ನೀಡಿ,ಕಡ್ಡಾಯವಾಗಿ ಮಾಸ್ಕ್ ಹಾಕಿ ಓಡಾಡುವಂತೆ ತಿಳಿಸಿದ್ದಾರೆ.