ಜೈಪುರ್ : ಬಾಲಿವುಡ್ ನಿರ್ಮಾಪಕ ವಿನೋದ್ ಕಾಪ್ರಿ ಅವರು ಕಸದ ತೊಟ್ಟಿಗೆ ಬಿಸಾಕಿದ್ದ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಕಳೆದ 4ದಿನದ ಹಿಂದೆ ರಾಜಸ್ಥಾನದಲ್ಲಿ ಆಗ ತಾನೆ ಹುಟ್ಟಿದ ಹೆಣ್ಣು ಮಗುವನ್ನು ಕಸದ ತೊಟ್ಟಿಗೆ ಎಸೆದಿದ್ದರು. ಮಗು ಅಳುವ ಶಬ್ದವನ್ನು ಕೇಳಿದ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋವನ್ನು ನೋಡಿದ ಬಾಲಿವುಡ್ ನಿರ್ಮಾಪಕ ವಿನೋದ್ ಕಾಪ್ರಿ ಅವರು ಆಸ್ಪತ್ರೆಗೆ ಧಾವಿಸಿ ಮಗುವನ್ನು ದತ್ತು ಪಡೆಯುವ ನಿರ್ಧಾರವನ್ನು ಕೈಗೊಂಡಿದ್ದು, ಮಗುವಿಗೆ ತಮ್ಮ ಕೊನೆಯ ಚಿತ್ರ “ಪಿಹು” ಟೈಟಲ್ ಹೆಸರನ್ನೇ ಇಟ್ಟಿದ್ದಾರೆ. ಸದ್ಯ ಮಗುವಿಗೆ ಉಸಿರಾಟದ ತೊಂದರೆಯಿಂದಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.










